ದರ್ಶನ್ ಜೈಲಿನಲ್ಲಿರುವಾಗ ವಿಜಯಲಕ್ಷ್ಮೀ ಮನೆಯಲ್ಲಿ ಕಳ್ಳತನ – 3 ಲಕ್ಷ ರೂಪಾಯಿ ದೋಚಿದವರು ಯಾರು?


ಸಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ವಾಸ ಅನುಭವಿಸುತ್ತಿರುವ ಸಂದರ್ಭದಲ್ಲಿ, ಅವರ ಪತ್ನಿ ವಿಜಯಲಕ್ಷ್ಮೀ ಮನೆ ಕಳ್ಳತನದ ಶಾಕಿಂಗ್ ಘಟನೆ ನಡೆದಿದೆ. ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಸುಮಾರು 3 ಲಕ್ಷ ರೂಪಾಯಿ ಹಣ ಕಳುವಾಗಿದೆ.
ವಿಜಯಲಕ್ಷ್ಮೀ ಅವರು ಬೆಂಗಳೂರಿನ ಹೊಸಕೆರೆಹಳ್ಳಿಯ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ನಲ್ಲಿ ವಾಸವಾಗಿದ್ದಾರೆ. ಈ ಮನೆಯಿಂದ ನಗದು ಹಣ ಕಳುವಾಗಿದೆ. ವಿಷಯ ಗಂಭೀರವಾಗಿದ್ದರಿಂದ, ವಿಜಯಲಕ್ಷ್ಮೀ ಅವರ ಮ್ಯಾನೇಜರ್ ನಾಗರಾಜ್ ನೇರವಾಗಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಈ ಕಳ್ಳತನದ ಬಗ್ಗೆ ವಿಜಯಲಕ್ಷ್ಮೀ ಅವರು ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮನೆ ಕೆಲಸದವರ ಮೇಲೆ ಅನುಮಾನ ವ್ಯಕ್ತವಾಗಿದೆ. ಇದನ್ನಾಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ತನಿಖೆ ಮುಂದುವರಿಸಿದ್ದಾರೆ. ಈ ಘಟನೆಯಿಂದಲೇ ವಿಜಯಲಕ್ಷ್ಮೀ ಈಗ ಮನೋಭಾರದಲ್ಲಿ ಮುಳುಗಿದ್ದಾರೆ. ಅವರ ಪತಿ ದರ್ಶನ್ ಜೈಲಿನಲ್ಲಿ ಇರುವ ದುಃಖ ಒಂದೆಡೆ, ಇದೀಗ ಮನೆ ಕಳ್ಳತನ ಮತ್ತೊಂದು ಶಾಕ್ ನೀಡಿದೆ.
ದರ್ಶನ್ ಬಿಡುಗಡೆ ಆಗಲಿ ಎಂಬ ಆಶಯದಿಂದ ಅವರು ಹಿಂದೆ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಹೈಕೋರ್ಟ್ ದರ್ಶನ್ ಅವರಿಗೆ ಜಾಮೀನು ನೀಡಿದ್ದರೂ, ಸುಪ್ರೀಂ ಕೋರ್ಟ್ ಅದನ್ನು ರದ್ದುಮಾಡಿದ ಪರಿಣಾಮ, ದರ್ಶನ್ ಮತ್ತೆ ಜೈಲಿಗೆ ಮರಳಬೇಕಾಯಿತು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದ್ದು, ಅಭಿಮಾನಿಗಳು ವಿಜಯಲಕ್ಷ್ಮೀ ಅವರಿಗೆ ಧೈರ್ಯ ನೀಡುತ್ತಿದ್ದಾರೆ. “ನೀವು ಶಕ್ತಿಯಾಗಿ ನಿಲ್ಲಬೇಕು” ಎಂದು ಹಲವರು ಹೇಳುತ್ತಿದ್ದಾರೆ.
ದರ್ಶನ್ ಪ್ರಕರಣದಿಂದಲೇ ಸುದ್ದಿಯಲ್ಲಿದ್ದ ವಿಜಯಲಕ್ಷ್ಮೀ ಈಗ ಮತ್ತೊಮ್ಮೆ ಕಳ್ಳತನ ಪ್ರಕರಣದಿಂದ ಸುದ್ದಿಯ ಅಲೆ ಎಬ್ಬಿಸಿದ್ದಾರೆ. ಪೊಲೀಸರು ಶೀಘ್ರದಲ್ಲೇ ಕಳ್ಳತನದ ನಿಜಾಸ್ತಿತಿ ಪತ್ತೆಹಚ್ಚುವ ನಿರೀಕ್ಷೆಯಿದೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
