‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ


ಕನ್ನಡ ಸಿನಿರಂಗದ ವಿಭಿನ್ನ ಚಿಂತನೆ ಹೊಂದಿರುವ ನಿರ್ದೇಶಕ ಹಾಗೂ ನಟ ರಾಜ್ ಬಿ ಶೆಟ್ಟಿ, ಬಾಲಿವುಡ್ ಸೂಪರ್ಸ್ಟಾರ್ ಅಕ್ಷಯ್ ಕುಮಾರ್ ಅವರನ್ನು ಭೇಟಿ ಮಾಡಿದ ಸುದ್ದಿ ಇದೀಗ ವೈರಲ್ ಆಗಿದೆ. ಈ ಭೇಟಿ, ಸಿನಿಮಾ ಸಹಯೋಗದ ಚರ್ಚೆಯ ಕಾರಣದಿಂದ ಮತ್ತಷ್ಟು ಕುತೂಹಲ ಮೂಡಿಸಿದೆ.
ರಾಜ್ ಬಿ ಶೆಟ್ಟಿ ನಿರ್ದೇಶನದ ‘ಸು ಫ್ರಮ್ ಸೋ’ ಸಿನಿಮಾ ಕೇವಲ ಕನ್ನಡದಲ್ಲೇ ಅಲ್ಲದೆ, ಪರಭಾಷೆಗಳಲ್ಲೂ ಭಾರಿ ಮೆಚ್ಚುಗೆ ಪಡೆದಿತು. ಕಥೆ, ನಿರೂಪಣೆ, ತಾಂತ್ರಿಕ ಅಂಶಗಳ ವಿಶಿಷ್ಟತೆಯ ಕಾರಣದಿಂದ, ಸಿನಿಮಾ ಹಿಂದಿಗೂ ರಿಮೇಕ್ ಆಗುತ್ತಿದೆ. ಚಿತ್ರದ ಯಶಸ್ಸಿನ ನಂತರ, ರಾಜ್ ಬಿ ಶೆಟ್ಟಿ ಅವರು ತಮ್ಮ ಮುಂದಿನ ಹಾದಿಗೆ ಹೆಜ್ಜೆಯಿಟ್ಟಿದ್ದಾರೆ.
ಈ ಹಿಂದೆ ‘ಸು ಫ್ರಮ್ ಸೋ’ ಯಶಸ್ಸಿನ ಸಂಭ್ರಮದಲ್ಲೇ, ನಿರ್ದೇಶಕ ಜೆಪಿ ಅವರು ಬಾಲಿವುಡ್ ನಟ ಅಜಯ್ ದೇವಗನ್ ಅವರನ್ನು ಭೇಟಿ ಮಾಡಿದ್ದರು. ಈಗ ರಾಜ್ ಬಿ ಶೆಟ್ಟಿ ಅವರು ಅಕ್ಷಯ್ ಕುಮಾರ್ ಅವರ ಜೊತೆಗಿನ ಮಾತುಕತೆ ನಡೆಸಿರುವುದು, ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ಈ ಭೇಟಿಯ ವಿಶೇಷ ಅಂದರೆ, ಅಕ್ಷಯ್ ಕುಮಾರ್ ಅವರು ಪ್ರಸ್ತುತ ಮಾಡುತ್ತಿರುವ ‘ಹೈವಾನ್’ ಸಿನಿಮಾದ ಶೂಟ್ ಸ್ಥಳ ಊಟಿಯ ಸೆಟ್ನಲ್ಲೇ ರಾಜ್ ಬಿ ಶೆಟ್ಟಿ ಅವರು ಅವರನ್ನು ಭೇಟಿ ಮಾಡಿದ್ದಾರೆ. ‘ಹೈವಾನ್’ ಸಿನಿಮಾವನ್ನು ಕನ್ನಡದ ಕೆವಿಎನ್ ನಿರ್ಮಾಣ ಸಂಸ್ಥೆ ಮಾಡುತ್ತಿದೆ.
ಅಕ್ಷಯ್ ಕುಮಾರ್ ಅವರು ‘ಸು ಫ್ರಮ್ ಸೋ’ ಸಿನಿಮಾ ನೋಡಿದ ನಂತರ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ. ಅವರು ರಾಜ್ ಬಿ ಶೆಟ್ಟಿಗೆ “ಕಥೆ ಇದ್ದರೆ ಹೇಳಿ, ಸಿನಿಮಾ ಮಾಡೋಣ” ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಆದರೆ, ರಾಜ್ ಬಿ ಶೆಟ್ಟಿ ಅವರ ಸಿನಿಮಾ ತಯಾರಿಕೆಯ ದೃಷ್ಟಿಕೋನ ಭಿನ್ನವಾಗಿದೆ. ಅವರು ಹಲವು ಬಾರಿ ಹೇಳಿರುವಂತೆ, ತಮ್ಮ ಸಿನಿಮಾಗಳಲ್ಲಿ ಸ್ಟಾರ್ ಹೀರೋಗಳ ಕಾಲ್ಶೀಟ್ಗಾಗಿ ಓಡಾಡುವುದನ್ನು ಇಷ್ಟಪಡುವುದಿಲ್ಲ. ಅವರ ದೃಷ್ಟಿಯಲ್ಲಿ ಕಥೆಯೇ ಸ್ಟಾರ್, ನಟನಿಗಿಂತ ಪಾತ್ರವೇ ಮುಖ್ಯ. ಹೀಗಾಗಿ, ಅಕ್ಷಯ್ ಕುಮಾರ್ ಜೊತೆ ಸಿನಿಮಾ ಮಾಡುವ ಸಾಧ್ಯತೆ ಎಷ್ಟಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಇವರಿಬ್ಬರ ಭೇಟಿಯೇ ಕನ್ನಡ ಸಿನಿರಂಗಕ್ಕೆ ದೊಡ್ಡ ಹೆಮ್ಮೆಯ ವಿಚಾರವಾಗಿದೆ.
ರಾಜ್ ಬಿ ಶೆಟ್ಟಿ ಅವರ ಕಲೆ ಮತ್ತು ದೃಷ್ಟಿಕೋನವನ್ನು ಬಾಲಿವುಡ್ ಮಟ್ಟದಲ್ಲಿ ಗುರುತಿಸಲಾಗಿದೆ ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಅಕ್ಷಯ್ ಕುಮಾರ್ ಜೊತೆ ಅವರ ಸಹಯೋಗ ನಿಜವಾದರೆ, ಅದು ಕೇವಲ ಕನ್ನಡಿಗರಿಗಷ್ಟೇ ಅಲ್ಲ, ಸಂಪೂರ್ಣ ಭಾರತೀಯ ಸಿನಿರಂಗಕ್ಕೆ ವಿಶೇಷ ತಿರುವು ತರಬಹುದು. ಈ ಸುದ್ದಿ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದ್ದು, ಅಭಿಮಾನಿಗಳು “ರಾಜ್ ಬಿ ಶೆಟ್ಟಿ–ಅಕ್ಷಯ್ ಕುಮಾರ್ ಕಾಂಬೋ” ನಿಜವಾಗಲಿ ಎಂದು ಬಯಸುತ್ತಿದ್ದಾರೆ.
Related posts
Trending News
ಹೆಚ್ಚು ನೋಡಿ‘ಕಥೆ ಇದ್ದರೆ ಹೇಳಿ ಸಿನಿಮಾ ಮಾಡೋಣ’ – ಅಕ್ಷಯ್ ಕುಮಾರ್ನ ಸ್ಪೆಷಲ್ ರಿಕ್ವೆಸ್ಟ್ ರಾಜ್ ಬಿ ಶೆಟ್ಟಿಗೆ
