“ನನಗೆ ವಿಷ ಕೊಡಿ” ಎಂದ ದರ್ಶನ್ ನೆನೆದು ಕಣ್ಣೀರು ಹಾಕಿದ ಮಡೆನೂರು ಮನು!


ಕನ್ನಡ ಚಿತ್ರರಂಗದ ನಟ ದರ್ಶನ್ ಜೈಲು ವಾಸದ ವಿಚಾರ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಿಶೇಷವಾಗಿ, ಕೋರ್ಟ್ ಮುಂದೆ ದರ್ಶನ್ ಅವರು ಹೇಳಿದ “ನನಗೆ ವಿಷ ಕೊಡಿ” ಎಂಬ ಮಾತು ಅಭಿಮಾನಿಗಳ ಮನಸ್ಸು ಮುರಿದಿತ್ತು. ಈ ಹಿನ್ನೆಲೆ, ಜೈಲು ವಾಸದ ತೀವ್ರ ಅನುಭವ ಹೊಂದಿದ್ದ ಮಡೆನೂರು ಮನು ತಮ್ಮ ಹಳೆಯ ಅನುಭವವನ್ನು ಹಂಚಿಕೊಂಡಿದ್ದಾರೆ.
ಮನು ಅವರು ಅತ್ಯಾಚಾರ ಆರೋಪ ಪ್ರಕರಣದಲ್ಲಿ ಕೆಲ ಕಾಲ ಜೈಲಿನಲ್ಲಿದ್ದರು. ಆ ದಿನಗಳನ್ನು ನೆನೆದು ಅವರು ಹೀಗೆ ಹೇಳಿದ್ದಾರೆ: “ಜೈಲು ಯಾವಾಗಲೂ ಜೈಲೇ. ನೀವು ಹೈಟೆಕ್ ಆಸ್ಪತ್ರೆಗೆ ಹೋದ್ರಿ ಅಂದ್ಕೊಳ್ಳಿ, ಅಲ್ಲಿ ಸೂಜಿ ಸುಚ್ಚಿಸಿಕೊಳ್ಳಲೇಬೇಕು. ಅದೇ ರೀತಿ ಜೈಲಿಗೂ ಹೋದಮೇಲೆ ನರಕಯಾತನೆ ಅನುಭವಿಸಲೇಬೇಕು. ಅಲ್ಲಿ ಜೀವನ ನಡೆಸೋದು ತುಂಬಾ ಕಷ್ಟ.”
ಮನು ಅವರ ಪ್ರಕಾರ, ಜೈಲು ವಾಸದಲ್ಲಿನ ದೊಡ್ಡ ಕಷ್ಟವೆಂದರೆ ಕುಟುಂಬದಿಂದ ದೂರವಾಗುವುದು. “ಒಳಗೆ ಹೋದ ಮೇಲೆ ನಾವು ಕುಟುಂಬದವರನ್ನು ಕಳೆದುಕೊಳ್ಳುತ್ತೇವೆ. ಕನಸು ಇರುವವರು ಒಳಗೆ ಹೋದರೆ ಅದು ದೊಡ್ಡ ನೋವು. ಯಾರಾದರೂ ಬಂದು ನೋಡಿದರೆ ಆ ಎರಡು ಗಂಟೆ ಮಾತ್ರ ಸಂತೋಷ. ಅದರ ನಂತರ ಮತ್ತೆ ಬೇಸರ.”
ಜೈಲಿನ ದಿನಚರಿ ಮನು ಅವರ ಮಾತುಗಳಲ್ಲಿ ಹೀಗಿದೆ: ಬೆಳಿಗ್ಗೆ 7ಕ್ಕೆ ತಿಂಡಿ, ಮಧ್ಯಾಹ್ನ 11ಕ್ಕೆ ಊಟ, ಸಂಜೆ 5ಕ್ಕೆ ಮತ್ತೆ ಊಟ, “ಸೊಳ್ಳೆ ಕಚ್ಚುತ್ತೆ. ಒಂದೊಂದು ದಿನವೂ ಕಳೆಯೋಕೆ ಆಗಲ್ಲ. ಆ ಜೀವನ ಯಾರಿಗೂ ಬೇಡ. ಡಿಪ್ರೆಶನ್ಗೆ ಹೋಗುವ ಸಾಧ್ಯತೆ ಹೆಚ್ಚು.” ಎಂದು ಅವರು ಹೇಳಿದ್ದಾರೆ.
ಮನು ಅವರು ದರ್ಶನ್ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. “ಯಾವ ಶತ್ರುಗಳಿಗೂ ಈ ಜೈಲು ಶಿಕ್ಷೆ ಬರಬಾರದು. ದರ್ಶನ್ ಶೀಘ್ರ ಬಿಡುಗಡೆ ಆಗಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಅವರು ಮನದಾಳದಿಂದ ಹೇಳಿದ್ದಾರೆ. ಮಡೆನೂರು ಮನು ಅವರ ಈ ಹೇಳಿಕೆಗಳು ಜೈಲಿನ ಕಠಿಣ ವಾಸ್ತವಿಕತೆಯನ್ನು ಹೊರಹಾಕುತ್ತವೆ. ದರ್ಶನ್ ಅಭಿಮಾನಿಗಳು ಮಾತ್ರವಲ್ಲ, ಕನ್ನಡ ಚಿತ್ರರಂಗದ ಅನೇಕ ಗಣ್ಯರು ಕೂಡ ಅವರ ಬೇಗ ಬಿಡುಗಡೆಗಾಗಿ ಕಾಯುತ್ತಿದ್ದಾರೆ.