ಬಿಗ್ ಬಾಸ್ ಮನೆ ವಿರೋಧಿಸಿದ್ದರೂ, ಸಂಜನಾ ಗಲ್ರಾನಿಗೆ ಸ್ಪೆಷಲ್ ಪವರ್ ನೀಡಿದ್ದಾರೆ! ಆ ಪವರ್ ಏನು?


ತೆಲುಗು ಬಿಗ್ ಬಾಸ್ ಸೀಸನ್ 09 ಶುರುವಾಗಿ ಇನ್ನೂ ಒಂದು ವಾರವೂ ಪೂರ್ಣವಾಗಿಲ್ಲ. ಆದರೂ ಮನೆಯ ಒಳಗೆ ಗುಂಪುಗಳಾಗಿ, ಜಗಳಗಳು ನಡೆಯುತ್ತಿವೆ. ಈ ಸೀಸನ್ನಲ್ಲಿ ಕನ್ನಡದ ನಟಿ ಸಂಜನಾ ಗಲ್ರಾನಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದು, ಈಗಾಗಲೇ ಮನೆಯ ಕೇಂದ್ರಬಿಂದುವಾಗಿದ್ದಾರೆ.
ಸಂಜನಾ ಈಗಾಗಲೇ ಕೆಲವರ ಜೊತೆ ಜಗಳ ಮಾಡಿಕೊಂಡಿದ್ದು, ಇಡೀ ಮನೆಯನ್ನು ಎದುರು ಹಾಕಿಕೊಂಡಿದ್ದಾರೆ. ಎಲ್ಲರೂ ಸೇರಿ ಸಂಜನಾರನ್ನು ನಾಮಿನೇಟ್ ಮಾಡಿರುವುದೇ ಅವರ ವಿರುದ್ಧದ ವಿರೋಧಕ್ಕೆ ಸಾಕ್ಷಿ. ಮನೆಯ ಪ್ರತಿಯೊಬ್ಬ ಸ್ಪರ್ಧಿಯೂ ಅವರ ಮೇಲೆ ಟಾರ್ಗೆಟ್ ಮಾಡಿಕೊಂಡಿದ್ದರೂ, ಸಂಜನಾ ತಾನಾಗಿಯೇ ತಮಗೆ ತೋಚಿದಂತೆ ನೇರವಾಗಿ ಮಾತನಾಡುತ್ತಿದ್ದಾರೆ.
ನಿನ್ನೆಯ ಎಪಿಸೋಡ್ನಲ್ಲಿ ಬಿಗ್ ಬಾಸ್ ಸಂಜನಾರನ್ನು ಕನ್ಫೆಷನ್ ರೂಂಗೆ ಕರೆದಿದ್ದರು. ಈ ವೇಳೆ ಅವರು ಮನೆಯ ಇತರೆ ಸ್ಪರ್ಧಿಗಳ ಬಗ್ಗೆ ನಿರಾಳವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು. “ನನಗೆ ಸರಿ ಎನಿಸಿದರೆ ಸರಿ ಎನ್ನುತ್ತೇನೆ, ತಪ್ಪೆನಿಸಿದರೆ ತಪ್ಪೆ ಎನ್ನುತ್ತೇನೆ. ನಾನು ನೇರವಗಿದ್ದೇನೆ” ಎಂದು ಹೇಳಿದ ಸಂಜನಾ, ಮನೆಯ ಹಲವರಿಗೆ ವಿಲನ್ ಆಗಿದ್ದಾರೆ.
ಮನೆಯ ಎಲ್ಲರೂ ವಿರೋಧಿಸಿದರೂ ಬಿಗ್ ಬಾಸ್ ಮಾತ್ರ ಸಂಜನಾ ಪರ ನಿಂತಿದ್ದಾರೆ. “ನೀವು ಚೆನ್ನಾಗಿ ಆಡುತ್ತಿದ್ದೀರಿ. ಎಲ್ಲರೂ ಸತ್ಯವನ್ನು ಮುಚ್ಚಿಡುತ್ತಾರೆ, ಆದರೆ ನೀವು ಧೈರ್ಯವಾಗಿ ಹೇಳುತ್ತೀರಿ” ಎಂದು ಸಂಜನಾರನ್ನು ಹೊಗಳಿದರು. ಇದರ ಜೊತೆಗೆ ಅವರಿಗೆ ವಿಶೇಷ ಪವರ್ ಸಹ ನೀಡಿದರು.
ಬಿಗ್ ಬಾಸ್ ಸಂಜನಾಗೆ ಮನೆಯ ಐದು ಮಂದಿಯ ಹೆಸರನ್ನು ಹೇಳುವ ಅಧಿಕಾರ ಕೊಟ್ಟರು. ಅವರಲ್ಲಿ ಒಬ್ಬರು ಕ್ಯಾಪ್ಟನ್ ಆಗಬೇಕಾಗಿತ್ತು. ಸಂಜನಾ ಹೇಳಿದ ಪಟ್ಟಿಯಲ್ಲಿ ಹೆಚ್ಚು ಸೆಲೆಬ್ರಿಟಿಗಳ ಹೆಸರುಗಳೇ ಇದ್ದವು. ಹೀಗಾಗಿ ಸಾಮಾನ್ಯ ಸ್ಪರ್ಧಿಗಳು ಕೋಪಗೊಂಡು ಸಂಜನಾರ ವಿರುದ್ಧ ಜಗಳ ಆರಂಭಿಸಿದರು. ಆದರೆ ಬಿಗ್ ಬಾಸ್ ಸ್ಪಷ್ಟವಾಗಿ ಮೂವರು ಸೆಲೆಬ್ರಿಟಿಗಳ ಹೆಸರನ್ನು ಕಡ್ಡಾಯವಾಗಿ ಸೇರಿಸಬೇಕು ಎಂದು ಹೇಳಿದ್ದರು.
ಎಲ್ಲರೂ ತಮ್ಮ ವಿರುದ್ಧ ಬಿದ್ದಿದ್ದರಿಂದ ತುಸು ಭಾವುಕರಾದ ಸಂಜನಾ, “ನನಗೆ ನೋವಿದೆ, ಆದರೆ ನಗುತ್ತಾ ಆಟವಾಡುತ್ತಿದ್ದೇನೆ. ಇದು ನನಗೆ ಸವಾಲು” ಎಂದು ಕನ್ಫೆಷನ್ ರೂಂನಲ್ಲಿ ಹೇಳಿಕೊಂಡರು. ಜೊತೆಗೆ ತಮ್ಮ ಮನೆಯವರ ಕ್ಷೇಮ ವಿಚಾರಿಸಿದರು. ಮನೆಯೊಳಗೆ ಸಂಜನಾ ಕಟು ಮಾತುಗಳಿಂದಲೂ, ತಮ್ಮ ನೇರ ಸ್ವಭಾವದಿಂದಲೂ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಮನೆಯ ಸ್ಪರ್ಧಿಗಳು ಅವರನ್ನು ಹೊರಹಾಕಲು ಒಗ್ಗಟ್ಟಾಗಿದ್ದರೂ, ಬಿಗ್ ಬಾಸ್ ಬೆಂಬಲ ಅವರ ಪರ ಬಲವಾಗಿದೆ.
ಒಟ್ಟಿನಲ್ಲಿ, ಸಂಜನಾ ಗಲ್ರಾನಿ ಕನಿಷ್ಠ ಒಂದು ತಿಂಗಳಿಗೂ ಹೆಚ್ಚು ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿಯುವ ಸಾಧ್ಯತೆ ಇದೆ. ಅವರ ನೇರತನ, ಧೈರ್ಯ ಮತ್ತು ಬಿಗ್ ಬಾಸ್ ಬೆಂಬಲವೇ ಅವರಿಗೆ ದೊಡ್ಡ ಹತ್ತಿರವಾಗಬಹುದು.