Back to Top

ಚಿತ್ರಮಂದಿರದಲ್ಲಿ ʻಉಪೇಂದ್ರʼ ಸಿನಿಮಾ ವೀಕ್ಷಿಸಿದ ಉಪೇಂದ್ರ!

SSTV Profile Logo SStv September 20, 2024
ʻಉಪೇಂದ್ರʼ ಸಿನಿಮಾ ವೀಕ್ಷಿಸಿದ ಉಪೇಂದ್ರ
ʻಉಪೇಂದ್ರʼ ಸಿನಿಮಾ ವೀಕ್ಷಿಸಿದ ಉಪೇಂದ್ರ
ಚಿತ್ರಮಂದಿರದಲ್ಲಿ ʻಉಪೇಂದ್ರʼ ಸಿನಿಮಾ ವೀಕ್ಷಿಸಿದ ಉಪೇಂದ್ರ! ರಿಯಲ್‌ ಸ್ಟಾರ್‌ ಉಪೇಂದ್ರ ಅವರೇ ನಿರ್ದೇಶಿಸಿ ನಟಿಸಿದ 1999ರ ‘ಉಪೇಂದ್ರ’ ಸಿನಿಮಾ ಇದೀಗ 25 ವರ್ಷಗಳ ನಂತರ ರೀರಿಲೀಸ್‌ ಆಗಿದೆ. ಈ ಅದ್ಧೂರಿ ಸಂದರ್ಭದಲ್ಲಿ, ಉಪೇಂದ್ರ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಮೊದಲ ಶೋ ವೀಕ್ಷಿಸಿದ್ದಾರೆ. ಅಭಿಮಾನಿಗಳ ನಡುವೆ ಕುಳಿತು ಸಿನಿಮಾ ನೋಡಿದ ಉಪ್ಪಿ, ಅವರ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿದರು. ಚಿತ್ರದ ರೀರಿಲೀಸ್‌ ಜೊತೆಗೆ, ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆಗಳನ್ನು ಮಳೆ ಮಾಡಿದರು. ಇದಾಗುತ್ತಿದ್ದಂತೆಯೇ ಉಪೇಂದ್ರ ಅವರ ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾ ‘ಯುಐ’ ಈ ಅಕ್ಟೋಬರ್‌ನಲ್ಲಿ ತೆರೆಗೆ ಬರಲು ಸಜ್ಜಾಗಿದೆ.