Back to Top

ವೀಕ್ಷಕರಿಗೆ ಬಿಗ್ ಬಾಸ್ ಕನ್ನಡ ಸೀಸನ್ 12ರಿಂದ ವಿಶೇಷ ಸರ್ಪ್ರೈಸ್! ಆ ಸರ್ಪ್ರೈಸ್ ಏನು?

SSTV Profile Logo SStv September 11, 2025
ಬಿಗ್​ಬಾಸ್​ ನೀಡುವ ಸರ್ಪ್ರೈಸ್ ಬಗ್ಗೆ ಅಪ್​ಡೇಟ್ಸ್​ ಕೊಟ್ಟ ಪ್ರಿಯಾಂಕ
ಬಿಗ್​ಬಾಸ್​ ನೀಡುವ ಸರ್ಪ್ರೈಸ್ ಬಗ್ಗೆ ಅಪ್​ಡೇಟ್ಸ್​ ಕೊಟ್ಟ ಪ್ರಿಯಾಂಕ

ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಇದೀಗ ತನ್ನ 12ನೇ ಸೀಸನ್‌ಗೆ ಕಾಲಿಡಲು ಸಜ್ಜಾಗಿದೆ. ಸೆಪ್ಟೆಂಬರ್ 28ರಿಂದ ಆರಂಭವಾಗಲಿರುವ ಈ ಭಾರಿ ಮನರಂಜನಾ ಕಾರ್ಯಕ್ರಮದ ಬಗ್ಗೆ ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ಕಾತರತೆ ಕಂಡುಬರುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಿರೂಪಣೆ ಮಾಡುವ ಕಾರಣದಿಂದಲೇ ಈ ಶೋಗೆ ವಿಶೇಷ ಆಕರ್ಷಣೆ ಇದೆ. ಆದರೆ, ಈ ಬಾರಿ ಬಿಗ್ ಬಾಸ್ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಪ್ರೇಕ್ಷಕರಿಗೂ ಬಿಗ್ ಸರ್ಪ್ರೈಸ್ ಸಿಗಲಿದೆ. ಹೌದು  ಬಿಗ್ ಬಾಸ್ ಮನೆಯಲ್ಲಿ ಅತಿಥಿಯಾಗಿ ಕಾಲಿಡುವ ಅವಕಾಶ ಈಗ ವೀಕ್ಷಕರಿಗೂ ಲಭ್ಯವಾಗುತ್ತಿದೆ!

ಅವಕಾಶ ಪಡೆಯೋದು ಹೇಗೆ? ಬಿಗ್ ಬಾಸ್ ಮಾಜಿ ಸ್ಪರ್ಧಿ ಮತ್ತು ಜನಪ್ರಿಯ ನಟಿ ಪ್ರಿಯಾಂಕ ಶಿವಣ್ಣ ಈ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ: ಇದೇ ಶುಕ್ರವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಎಲ್ಲಾ ಸೀರಿಯಲ್‌ಗಳನ್ನು ವೀಕ್ಷಕರು ತಪ್ಪದೇ ನೋಡಬೇಕು. ಆ ಸೀರಿಯಲ್‌ಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಕೇಳಲಾಗುತ್ತವೆ.

ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಜಿಯೋ ಸಿನೆಮಾ ಅಥವಾ ಹಾಟ್‌ಸ್ಟಾರ್ ಆಪ್ ಮೂಲಕ ಕಳುಹಿಸಬೇಕು. ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಪ್ರೇಕ್ಷಕರಿಗೆ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಪ್ರವೇಶಿಸುವ ಅಪರೂಪದ ಅವಕಾಶ ಸಿಗಲಿದೆ.

ಈಗಾಗಲೇ ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳು ಯಾರು ಎಂಬ ಕುತೂಹಲ ಹೆಚ್ಚುತ್ತಿದೆ. ಅದಕ್ಕೆ ಜೊತೆಯಾಗಿ, ಕಿಚ್ಚ ಸುದೀಪ್ ಅವರ ಹೊಸ ಲುಕ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಪ್ರತಿ ಸೀಸನ್‌ನಲ್ಲಿ ಸುದೀಪ್ ಅವರ ಫ್ಯಾಷನ್ ಹಾಗೂ ನಿರೂಪಣಾ ಶೈಲಿ ಪ್ರೇಕ್ಷಕರ ಮನ ಸೆಳೆಯುತ್ತಲೇ ಬಂದಿದೆ. ಈ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ನಡೆಯುವ ಟಾಸ್ಕ್‌ಗಳು, ಜಗಳಗಳು, ಸ್ನೇಹಗಳು, ಅಚ್ಚರಿಗಳು ಮನರಂಜನೆಗೆ ಪೂರ್ತಿಯಾಗಿ ಖಾತರಿ ಇದೆ.

ಇದೀಗ ಬಿಗ್ ಬಾಸ್ ಕೇವಲ ಟಿವಿಯಲ್ಲಿ ನೋಡೋಷ್ಟಕ್ಕೆ ಸೀಮಿತವಾಗದೆ, ಮನೆಯಲ್ಲಿ ನೇರ ಅನುಭವ ಪಡೆಯುವ ಅವಕಾಶ ಸಿಕ್ಕಿದೆ. ಬಿಗ್ ಬಾಸ್ ಮನೆಯಲ್ಲಿ ಒಂದೇ ದಿನ ಕಳೆದರೂ ಅದು ಮರೆಯಲಾಗದ ಅನುಭವವಾಗಲಿದೆ. ಆದ್ದರಿಂದ, ಬಿಗ್ ಬಾಸ್ ಮನೆಯಲ್ಲಿ ಕಾಲಿಡೋ ಕನಸು ಹೊಂದಿರುವ ಎಲ್ಲರೂ ಈ ಶುಕ್ರವಾರ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಸೀರಿಯಲ್‌ಗಳನ್ನು ತಪ್ಪದೆ ವೀಕ್ಷಿಸಿ, ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ. ಇದೇ ಬಿಗ್ ಬಾಸ್ ಸೀಸನ್ 12ರ ವಿಶೇಷತೆ ಪ್ರೇಕ್ಷಕರಿಗೆ ನೇರವಾಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಅವಕಾಶ!