Back to Top

ಮೊದಲ ಬಾರಿಗೆ ಬೋಲ್ಡ್ ಲುಕ್‌ನಲ್ಲಿ ಮೆರೆದ ರುಕ್ಮಿಣಿ ವಸಂತ್ – ಕೆಂಪು ಗೌನ್‌ನಲ್ಲಿ ಮಿಂಚಿದ ನಟಿ!

SSTV Profile Logo SStv September 4, 2025
ರುಕ್ಮಿಣಿ ವಸಂತ್ ಹೊಸ ಬೋಲ್ಡ್ ಲುಕ್
ರುಕ್ಮಿಣಿ ವಸಂತ್ ಹೊಸ ಬೋಲ್ಡ್ ಲುಕ್

ಮೊನ್ನೆಯಷ್ಟೇ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಿಂದ ಸಿಕ್ಕ ಯಶಸ್ಸಿನ ನೆನಪನ್ನು ಹಂಚಿಕೊಂಡು ಭಾವಪೂರ್ಣ ಪತ್ರ ಬರೆದಿದ್ದ ರುಕ್ಮಿಣಿ ವಸಂತ್, ಇದೀಗ ತಮ್ಮ ಹೊಸ ಲುಕ್‌ನಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದ್ದಾರೆ. ಇದುವರೆಗೂ ಸೀರೆಯ ಅಂದ, ಪಕ್ಕದ್ಮನೆ ಹುಡುಗಿ ಶೈಲಿಯ ಮೂಲಕ ಜನಮನ ಗೆದ್ದಿದ್ದ ರುಕ್ಮಿಣಿ, ಮೊದಲ ಬಾರಿಗೆ ಬೋಲ್ಡ್ ಫೋಟೋಶೂಟ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಕೆಂಪು ಬಣ್ಣದ ಗೌನ್ ಧರಿಸಿ ಪೋಸ್ ಕೊಟ್ಟಿರುವ ರುಕ್ಮಿಣಿ, ಹಿಂದೆಂದೂ ಕಾಣದ ಬೋಲ್ಡ್ ಅವತಾರದಲ್ಲಿ ಮಿಂಚಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಈ ಹೊಸ ಫೋಟೋಗಳಲ್ಲಿ ರುಕ್ಮಿಣಿ ಎದೆಸೀಳು ತೋರಿಸುವಂತೆ ಉಡುಪನ್ನು ಧರಿಸಿದ್ದು, ತಮ್ಮ ಫ್ಯಾಶನ್ ಸ್ಟೈಲ್‌ನಲ್ಲಿ ದೊಡ್ಡ ಬದಲಾವಣೆಯನ್ನು ತೋರಿಸಿದ್ದಾರೆ. ಪಾತ್ರಗಳಿಗೆ ತಕ್ಕಂತೆ ಬದಲಾವಣೆ ಮತ್ತು ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವಿಕೆ ಈಗ ತಮಗೆ ಮುಖ್ಯ ಎಂದು ತೋರುತ್ತಿದೆ.

ಸಪ್ತ ಸಾಗರದಾಚೆ ಎಲ್ಲೋ ಮೂಲಕ ಪ್ರೇಕ್ಷಕರ ಮನ ಗೆದ್ದ ಬಳಿಕ, ರುಕ್ಮಿಣಿ ಈಗ ದಕ್ಷಿಣ ಭಾರತದೆಲ್ಲೆಡೆ ಹೆಸರು ಮಾಡುತ್ತಿದ್ದಾರೆ. ಕನ್ನಡದ ಹೊರಗೂ ಪರಭಾಷಾ ಇಂಡಸ್ಟ್ರಿಗಳಲ್ಲೂ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗೆ ಅವರು ಕಾಂತಾರ ಚಾಪ್ಟರ್-1 ಹಾಗೂ ಡ್ರ್ಯಾಗನ್ ಸಿನಿಮಾಗಳಲ್ಲಿ ನಾಯಕಿಯಾಗಿ ಆಯ್ಕೆಯಾಗಿರುವುದು ಅವರ ಕ್ರೇಜ್ ಎಷ್ಟಿದೆ ಎನ್ನುವುದಕ್ಕೆ ಸಾಕ್ಷಿ.

ಚಿತ್ರಗಳ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಹೆಚ್ಚು ಆಕ್ಟೀವ್ ಆಗಿರುವ ರುಕ್ಮಿಣಿ, ಇದೀಗ ಫ್ಯಾಷನ್‌ನಲ್ಲಿ ಬೋಲ್ಡ್ ಲುಕ್‌ಗೆ ಅವಕಾಶ ನೀಡುತ್ತಿರುವುದು ಸ್ಪಷ್ಟ. ಪಕ್ಕದ್ಮನೆ ಹುಡುಗಿ ಇಮೇಜ್‌ನಿಂದ ಬೋಲ್ಡ್ ಅವತಾರದತ್ತ ಕಾಲಿಟ್ಟಿರುವ ರುಕ್ಮಿಣಿ, ತಮ್ಮ ಹೊಸ ಶೈಲಿಯಿಂದ ಫ್ಯಾನ್ಸ್‌ಗೆ ಸರ್ಪ್ರೈಸ್ ನೀಡಿದ್ದಾರೆ. ಒಟ್ಟಿನಲ್ಲಿ, ರುಕ್ಮಿಣಿ ವಸಂತ್ ತಮ್ಮ ಅಭಿನಯದಷ್ಟೇ ಫ್ಯಾಷನ್ ಶೈಲಿಯಲ್ಲೂ ಹೊಸ ಮುಖ ತೋರಿಸುತ್ತಿದ್ದು, ಅವರ ಈ ಬದಲಾವಣೆ ಮುಂದಿನ ದಿನಗಳಲ್ಲಿ ಇನ್ನಷ್ಟು ಚರ್ಚೆಗೀಡಾಗುವುದು ಖಚಿತ.