Back to Top

ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಲಾಂಚ್ ಆಯ್ತು ಟ್ರೈಲರ್

SSTV Profile Logo SStv September 23, 2024
ಪ್ರಕರಣ ತನಿಖಾ ಹಂತದಲ್ಲಿದೆ ಲಾಂಚ್ ಆಯ್ತು ಟ್ರೈಲರ್
ಪ್ರಕರಣ ತನಿಖಾ ಹಂತದಲ್ಲಿದೆ ಲಾಂಚ್ ಆಯ್ತು ಟ್ರೈಲರ್
ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಲಾಂಚ್ ಆಯ್ತು ಟ್ರೈಲರ್ ಪ್ರಕರಣ ತನಿಖಾ ಹಂತದಲ್ಲಿದೆ ಚಿತ್ರದ ಟ್ರೈಲರ್ ಭರ್ಜರಿಯಾಗಿ ಲಾಂಚ್ ಆಗಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೇ ಶೀರ್ಷಿಕೆಯಿಂದಲೇ ಕುತೂಹಲ ಕೆರಳಿಸಿದ್ದ ಈ ಚಿತ್ರ, ಈಗಾಗಲೇ ಮೋಷನ್ ಪೋಸ್ಟರ್, ಟೈಟಲ್ ಟ್ರ್ಯಾಕ್ ಮೂಲಕ ಸುದ್ದಿಯಲ್ಲಿದೆ. ಅಚ್ಚುಕಟ್ಟಾದ ಪತ್ರಿಕಾ ಗೋಷ್ಠಿಯಲ್ಲಿ ಚಿತ್ರತಂಡ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದು, ನಿರ್ಮಾಪಕ ಚಿಂತನ್ ಕಂಬಣ್ಣ ಅವರ ತಂದೆ ಡಾ. ಶಿವಣ್ಣ.ಕೆ ಆನಾವರಣ ಮಾಡಿದ್ದಾರೆ. ಡಾ. ಶಿವಣ್ಣ ಈ ಚಿತ್ರದ ಟೈಟಲ್ ಟ್ರ್ಯಾಕ್ ಗೆ ಸಾಹಿತ್ಯ ಬರೆದಿದ್ದು, ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ನಿರ್ದೇಶಕ ಸುಂದರ್ ಎಸ್ ಅವರ ಕಥೆ ಈ ಚಿತ್ರಕ್ಕೆ ಮೂಲವಾಗಿ, ರಂಗಭೂಮಿ ಹಿನ್ನೆಲೆಯುಳ್ಳ ತಂಡದೊಂದಿಗೆ ಈ ಸಿನಿಮಾ ಮೂಡಿಬಂದಿದೆ. ಅಕ್ಟೋಬರ್ 18ರಂದು ಬಿಡುಗಡೆಗೊಳ್ಳಲಿರುವ ಈ ಚಿತ್ರ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸಿದೆ.