ಬೆಂಗಳೂರಲ್ಲಿ ಮಾತ್ರವಲ್ಲ ಮುಂಬೈ ಜೈಲಿನ ಸ್ಥಿತಿಯೂ ಅದೇ; ಸಲ್ಲು ಕೇಸ್ ಆರೋಪಿಯ ಅಳಲು


ಬೆಂಗಳೂರಲ್ಲಿ ಮಾತ್ರವಲ್ಲ ಮುಂಬೈ ಜೈಲಿನ ಸ್ಥಿತಿಯೂ ಅದೇ; ಸಲ್ಲು ಕೇಸ್ ಆರೋಪಿಯ ಅಳಲು
ದರ್ಶನ್ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಹೋದಾಗ ಹಣ ನೀಡಿದರೆ ಮಾತ್ರ ವ್ಯವಸ್ಥೆಗಳು ಸಿಗುತ್ತವೆ ಎನ್ನುವ ವಿಚಾರ ಗೊತ್ತಾಗಿತ್ತು. ಜೈಲುಗಳನ್ನು ರೆಸಾರ್ಟ್ ಮಾದರಿಯಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ಕೂಡ ಹೇಳಲಾಗಿತ್ತು. ಇದು ಕೇವಲ ಬೆಂಗಳೂರು ಜೈಲಿನ ಸ್ಥಿತಿ ಮಾತ್ರವಲ್ಲ ಅನ್ನೋದು ಗೊತ್ತಾಗಿದೆ.
ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಹಣ ನೀಡಿದರೆ ಮಾತ್ರ ಸೌಲಭ್ಯ ಸಿಗುತ್ತದೆ ಎಂಬ ಆರೋಪ ಹಳೇದು. ಇಂತಹ ಪರಿಸ್ಥಿತಿ ಮುಂಬೈನ ತಾಲೋಜಾ ಜೈಲಿನಲ್ಲೂ ಇದೆ ಎಂಬುದಾಗಿ ಸಲ್ಲು ಕೇಸ್ನಲ್ಲಿ ಬಂಧಿತನಾದ ಹರ್ಪಾಲ್ ಸಿಂಗ್ ಅಳಲು ತೋಡಿಕೊಂಡಿದ್ದಾನೆ.
ಸಲ್ಮಾನ್ ಖಾನ್ ಅವರ ಮನೆ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಹರ್ಪಾಲ್ ಸಿಂಗ್ ಅನ್ನು ಮುಂಬೈ ಜೈಲಿಗೆ ಕಳುಹಿಸಲಾಗಿತ್ತು. ಆತನ ಕೈಗೆ ಪೆಟ್ಟಾಗಿದ್ದರೂ, ಚಿಕಿತ್ಸೆಗೆ ಹಣಕ್ಕಾಗಿ ವೈದ್ಯರು ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತಾಗಿ ಕೋರ್ಟ್ ಈಗ ಜೈಲಿನ ವೈದ್ಯಾಧಿಕಾರಿಗಳಿಗೆ ವರದಿ ನೀಡಲು ಮತ್ತು ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದೆ.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
