Back to Top

ಪ್ರೀತಿಯಲ್ಲಿ ಬಿದ್ದರಾ ಸಾನ್ವಿ ಸುದೀಪ್? ಲವ್ ಬಗ್ಗೆ ಸಾನ್ವಿ ಸುದೀಪ್ ಹೇಳಿದ್ದೇನು? ಇಲ್ಲಿದೆ ಸುದ್ದಿ

SSTV Profile Logo SStv September 8, 2025
ಲವ್ ಬಗ್ಗೆ ಸ್ಪಷ್ಟ ಅಭಿಪ್ರಾಯ ಹಂಚಿಕೊಂಡ ಕಿಚ್ಚ ಮಗಳು!
ಲವ್ ಬಗ್ಗೆ ಸ್ಪಷ್ಟ ಅಭಿಪ್ರಾಯ ಹಂಚಿಕೊಂಡ ಕಿಚ್ಚ ಮಗಳು!

ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಯಾವ ವಿಷಯದಲ್ಲಾದರೂ ಮುಕ್ತವಾಗಿ ಮಾತನಾಡುತ್ತಾರೆ. ತಮ್ಮ ಮನದ ಮಾತು, ಅಭಿಪ್ರಾಯವನ್ನು ಅಳುಕಿಲ್ಲದೆ ಹಂಚಿಕೊಳ್ಳುವ ಧೈರ್ಯ ಇವರಲ್ಲಿದೆ. ಇತ್ತೀಚೆಗೆ ಅವರು ಲವ್ ಮತ್ತು ರಿಲೇಷನ್‌ಶಿಪ್‌ ಕುರಿತು ತಮ್ಮದೇ ನೇರ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ವಿಚಾರದಲ್ಲಿ ಸಾನ್ವಿ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ವಿಡಿಯೋವೊಂದನ್ನೂ ಹಂಚಿಕೊಂಡಿದ್ದು, ಅಭಿಮಾನಿಗಳ ನಡುವೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

"ಇಂದಿನ ಜನರೇಷನ್ ತಮ್ಮದೇ ರೀತಿಯ ಹಾದಿ ಮಾಡಿಕೊಂಡಿದ್ದಾರೆ. ಸಿಚ್ಯುವೇಷನ್‌ಶಿಪ್, ಓಪನ್ ರಿಲೇಷನ್‌ಶಿಪ್ ಅಂತ ಹಲವಾರು ಹೊಸ ಪದಗಳನ್ನು ಬಳಸುತ್ತಿದ್ದಾರೆ. ಆದರೆ, ನನಗೆ ಇವುಗಳ ಮೇಲೆ ನಂಬಿಕೆ ಇಲ್ಲ. ನನಗೆ ಸೆಲ್ಫ್ ರೆಸ್ಪೆಕ್ಟ್ ಮುಖ್ಯ. ನಾನು ಒಬ್ಬರನ್ನು ಪ್ರೀತಿಸಿದ್ದೇನೆ ಅಂದ್ರೆ, ಜೀವನ ಪೂರ್ತಿ ಅವರ ಜೊತೆಗೆ ಇರೋಕೆ ಇಷ್ಟಪಡುತ್ತೇನೆ. ಓಪನ್ ರಿಲೇಷನ್‌ಶಿಪ್ ಬಗ್ಗೆ ನನಗೆ ನಂಬಿಕೆ ಇಲ್ಲ. ನನಗೆ ಸೀರಿಯಸ್ ರಿಲೇಷನ್‌ಶಿಪ್‌ ಮೇಲೆ ನಂಬಿಕೆ ಇದೆ," ಎಂದು ಸಾನ್ವಿ ಸ್ಪಷ್ಟಪಡಿಸಿದ್ದಾರೆ.

Gen Z ಕಾಲದ ಹುಡುಗಿಯಾದರೂ, ಸಾನ್ವಿ ಸಂಬಂಧಗಳ ಮೌಲ್ಯವನ್ನು ಅರಿತುಕೊಂಡಿದ್ದಾರೆ. ನಿಜವಾದ ಬಾಂಧವ್ಯಕ್ಕೆ ಮಹತ್ವ ಕೊಡುವುದರಲ್ಲಿ ತಮ್ಮ ದೃಢ ನಿಲುವು ತೋರಿಸಿದ್ದಾರೆ.

ಸಾನ್ವಿ ಕೇವಲ ರಿಲೇಷನ್‌ಶಿಪ್ ಬಗ್ಗೆ ಮಾತ್ರವಲ್ಲ, ತಮ್ಮ ಭವಿಷ್ಯದ ಗುರಿಗಳನ್ನೂ ಹಂಚಿಕೊಂಡಿದ್ದಾರೆ:

  • ಸಂಗೀತದ ಮೇಲೆ ವಿಶೇಷ ಆಸಕ್ತಿ.
  • ದಕ್ಷಿಣ ಭಾರತೀಯ ಹಾಡುಗಳಿಂದ ಹಿಡಿದು ಬಾಲಿವುಡ್, ಇಂಗ್ಲಿಷ್ ಹಾಡುಗಳವರೆಗೂ ಹಾಡುವ ಶಕ್ತಿ.
  • ನಟನೆ ಹಾಗೂ ಡೈರೆಕ್ಷನ್ ಬಗ್ಗೆ ಕುತೂಹಲ.
  • ವಿಶೇಷವಾಗಿ, ತಮ್ಮ ಅಪ್ಪ ಸುದೀಪ್ ಎದುರು ವಿಲನ್ ಪಾತ್ರ ಮಾಡುವ ಕನಸು!

ಸಾನ್ವಿ ತಮ್ಮ ಅಭಿಪ್ರಾಯವನ್ನು ರಾಪಿಡ್ ರಶ್ಮಿ ನಡೆಸುವ “ಜೆಸ್ಟ್ ಕ್ಯೂರಿಯಸ್” ಶೋಯಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ, ಸಾನ್ವಿ ಸುದೀಪ್ ಅವರ ಮಾತುಗಳು ಹೊಸ ಜನರೇಷನ್‌ಗೆ ಸ್ಪೂರ್ತಿದಾಯಕ. ಪ್ರೀತಿಯ ಅರ್ಥ, ಬಾಂಧವ್ಯದ ಮೌಲ್ಯ ಹಾಗೂ ಸ್ವತಂತ್ರ ವ್ಯಕ್ತಿತ್ವವನ್ನು ತೋರಿಸುವ ರೀತಿಯಲ್ಲಿ ಅವರು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.