'ಕುರುಕ್ಷೇತ್ರ'ದ ನಟ, ನಿರ್ಮಾಪಕರಿಗೆ ಜೈಲುಪಾಲು: ಕಾಕತಾಳೀಯವೋ ಶಾಪವೋ..?


'ಕುರುಕ್ಷೇತ್ರ'ದ ನಟ, ನಿರ್ಮಾಪಕರಿಗೆ ಜೈಲುಪಾಲು: ಕಾಕತಾಳೀಯವೋ ಶಾಪವೋ..?
ಕುರುಕ್ಷೇತ್ರ ಸಿನಿಮಾ ಬಂದಿದ್ದೂ ಆಯ್ತು ಯಶಸ್ಸು ಕಂಡಿದ್ದು ಆಯ್ತು. ಆದ್ರೆ ಈಗ ಅಚ್ಚರಿ ಎಂಬಂತೆ, ಈ ಕುರುಕ್ಷೇತ್ರದ ನಾಯಕ ದರ್ಶನ್ ಮತ್ತು ನಿರ್ಮಾಪಕ ಮುನಿರತ್ನ ಇಬ್ಬರು ಕೂಡ ಜೈಲು ಸೇರಿದ್ದಾರೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿದ್ರೆ, ಮುನಿರತ್ನ ಅವರು ಜೀವ ಬೆದರಿಕೆ ಕೇಸ್ ನಲ್ಲಿ ಶನಿವಾರ ಅಂದರ್ ಆಗಿದ್ದಾರೆ.
ಸ್ಯಾಂಡಲ್ವುಡ್ ನಲ್ಲಿ 2019ರಲ್ಲಿ ತೆರೆಗೆ ಬಂದ 'ಕುರುಕ್ಷೇತ್ರ' ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. 3ಡಿ ಮೋಡಿಯಲ್ಲಿ ಈ ಪೌರಾಣಿಕ ಯುದ್ಧದ (Kurukshetra) ಸಿನಿಮಾವನ್ನು ನಿರ್ಮಾಪಕ ಮುನಿರತ್ನ ಅದ್ದೂರಿಯಾಗಿ ನಿರ್ಮಾಣ ಮಾಡಿದ್ರು. ದರ್ಶನ್ ಕುರುವಂಶದ ದೊರೆ ದುರ್ಯೋಧನನಾಗಿ ಅಬ್ಬರಿಸಿದ್ರು. ಅಚ್ಚರಿ ಅಂದ್ರೆ ಈ ಇಬ್ಬರು ಕೂಡ ಈಗ ಜೈಲಿನಲ್ಲಿದ್ದಾರೆ. ಹಾಗಾದ್ರೆ ಕುರುಕ್ಷೇತ್ರದ ಶಾಪವೇ ಇದರ ನಟ, ನಿರ್ಮಾಪಕರ ಜೈಲುವಾಸಕ್ಕೆ ಕಾರಣನಾ..? ಆ ಕುರಿತ ರೋಚಕ ಸ್ಟೋರಿ ಇಲ್ಲಿದೆ ನೋಡಿ.
ಸ್ಯಾಂಡಲ್ ವುಡ್ ನಿರ್ಮಾಪಕ ಮುನಿರತ್ನ ಜೈಲುಪಾಲು, ಕುರುಕ್ಷೇತ್ರದ ನಟ, ನಿರ್ಮಾಪಕರಿಗೆ ಬೆನ್ನುಬಿತ್ತಾ ಶಾಪ..?
ಯೆಸ್ ನಿರ್ಮಾಪಕ ಹಾಗೂ ಶಾಸಕ ಮುನಿರತ್ನ ಜೈಲು ಪಾಲಾಗಿದ್ದಾರೆ. ಜಾತಿನಿಂದನೆ ಹಾಗೂ ಜೀವ ಬೆದರಿಕೆ ಕೇಸ್ ನಲ್ಲಿ ಮುನಿರತ್ನರನ್ನ ಬಂಧಿಸಲಾಗಿದೆ. ಈ ಬಗ್ಗೆ ರಾಜಕೀಯ ಕೆಸರೆರಚಾಟಗಳು ನಡೀತಾ ಇವೆ. ಈ ರಾಜಕೀಯವನ್ನ ಪಕ್ಕಕ್ಕಿಟ್ಟು ನೋಡೋದಾದ್ರೆ ಕನ್ನಡ ಚಿತ್ರರಂಗದಲ್ಲಿ ಮುನಿರತ್ನ ಪ್ರತಿಷ್ಠಿತ ನಿರ್ಮಾಪಕ ಆಗಿದ್ದವರು. ಅಷ್ಟೇ ಅಲ್ಲ ನಿರ್ಮಾಪಕರ ಸಂಘದ ಅಧ್ಯಕ್ಷ ಕೂಡ ಆಗಿದ್ರು.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
