ರಿಷಬ್ ಶೆಟ್ಟಿಯ ಕಾಂತಾರ ಚಾಪ್ಟರ್-1 ಕೌಂಟ್‌ಡೌನ್ ಈಗಲೇ ಶುರು – ಫ್ಯಾನ್ಸ್‌ಗಳಲ್ಲಿ ಕ್ರೇಜ್ ಜೋರಾಯಿತು!


ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್ ಒನ್ ಚಿತ್ರದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇನ್ನೂ ಚಿತ್ರ ಬಿಡುಗಡೆಗೆ ಒಂದು ತಿಂಗಳಿಗಿಂತ ಹೆಚ್ಚು ಸಮಯ ಇದ್ದರೂ, ಅಭಿಮಾನಿಗಳು ಈಗಲೇ ಕೌಂಟ್‌ಡೌನ್ ಶುರುಮಾಡಿದ್ದಾರೆ. ರಿಷಬ್ ಶೆಟ್ಟಿ ಹೆಸರಿನ ಫ್ಯಾನ್ ಪೇಜ್‌ನಲ್ಲಿ ಬಿಡುಗಡೆಯ ದಿನಾಂಕಕ್ಕೆ ಸಂಬಂಧಿಸಿದಂತೆ ಕೌಂಟ್‌ಡೌನ್ ಪೋಸ್ಟ್ ಹಂಚಲಾಗಿದೆ. ಅಕ್ಟೋಬರ್ 2ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಸೆಪ್ಟೆಂಬರ್ 3ಕ್ಕೆ ಕೇವಲ 29 ದಿನಗಳು ಮಾತ್ರ ಬಾಕಿ ಎಂದು ಲೆಕ್ಕ ಹಾಕಲಾಗಿದೆ. ಇದಲ್ಲದೆ, ಚಿತ್ರದ ಟ್ರೈಲರ್ ಯಾವಾಗ ಬರುತ್ತದೆ ಎಂಬ ಸಣ್ಣ ಕ್ಲೂ ಕೂಡ ಪೋಸ್ಟರ್‌ನಲ್ಲಿ ನೀಡಲಾಗಿದೆ.
ಕಾಂತಾರ ಮೊದಲ ಭಾಗ ಯಶಸ್ಸಿನ ನಂತರ, ಕಾಂತಾರ ಚಾಪ್ಟರ್ ಒನ್ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಆಕಾಶ ಮುಟ್ಟಿದೆ. ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ, ಈಗಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಚಿತ್ರದ ಶೂಟಿಂಗ್ ಮುಗಿದಿದ್ದು, ಸದ್ಯದಲ್ಲಿ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿ ಕೆಲಸಗಳು ಜೋರಾಗಿ ನಡೆಯುತ್ತಿವೆ. ಇತ್ತೀಚೆಗಷ್ಟೇ ರಿಷಬ್ ಶೆಟ್ಟಿ ಮೇಕಿಂಗ್ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಮೂರು ವರ್ಷಗಳ ಸಿನಿಮಾ ನಿರ್ಮಾಣದ ಹಿನ್ನಲೆಯ ಕಥೆ, ತಂಡದ ಪರಿಶ್ರಮ ಹಾಗೂ ದೈವದ ಆಶೀರ್ವಾದದ ಅನುಭವವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ಕನಕವತಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಿಷಬ್ ಶೆಟ್ಟಿ ಅವರ ಲುಕ್ ಸಂಪೂರ್ಣ ಹೊಸದಾಗಿದೆ. ಬಾಲಿವುಡ್ ನಟ ಗುಲ್ಶನ್ ದೇವಯ್ಯ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಸಂಗೀತವನ್ನು ಅಜನೀಶ್ ಲೋಕನಾಥ್ ಸಂಯೋಜಿಸಿದ್ದು, ಕ್ಯಾಮರಾವರ್ಕ್ ಅನ್ನು ಅರವಿಂದ್ ಕಶ್ಯಪ್ ಮಾಡಿದ್ದಾರೆ.
ಕಾಂತಾರ ಚಾಪ್ಟರ್ ಒನ್ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಭಾರೀ ಬಜೆಟ್‌ನಲ್ಲಿ ನಿರ್ಮಿಸಿ, ಅಕ್ಟೋಬರ್ 2 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿದೆ. ಮೊದಲ ಭಾಗದ ಯಶಸ್ಸು ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವುದರಿಂದ, ಈ ಬಾರಿ ಸಿನಿಮಾ ಮತ್ತೊಂದು ಇತಿಹಾಸ ಬರೆಯಲಿದೆ ಎಂಬ ಭರವಸೆ ಮೂಡಿದೆ. ಈಗ ಅಭಿಮಾನಿಗಳ ಕಣ್ಣುಗಳು ಕೇವಲ ಒಂದು ದಿನಾಂಕದತ್ತ ಅಕ್ಟೋಬರ್ 2, ಕಾಂತಾರ ಚಾಪ್ಟರ್ ಒನ್ ಬಿಡುಗಡೆ ದಿನ!
Trending News
ಹೆಚ್ಚು ನೋಡಿಚಿತ್ರಸಾಹಿತಿ ನಾಗಾರ್ಜುನ್ ಶರ್ಮಾ ಹೊಸ ಪ್ರಯತ್ನ... ಶುಭಾಶಯ ಆಲ್ಬಂ ಸಾಂಗ್ನಲ್ಲಿ ಮಿಂಚಿದ ಪೃಥ್ವಿ-ಅಂಜಲಿ
