Back to Top

ದರ್ಶನ್‌ ಬಿಡುಗಡೆಗಾಗಿ ಫ್ಯಾನ್ಸ್‌ ವಿಶೇಷ ಪೂಜೆ: ಬೂದುಕುಂಬಳಕಾಯಿ ದೀಪ ಬೆಳಗಿಸಿ ಪ್ರಾರ್ಥನೆ

SSTV Profile Logo SStv September 19, 2024
ದರ್ಶನ್‌ ಬಿಡುಗಡೆಗಾಗಿ ಫ್ಯಾನ್ಸ್‌ ವಿಶೇಷ ಪೂಜೆ
ದರ್ಶನ್‌ ಬಿಡುಗಡೆಗಾಗಿ ಫ್ಯಾನ್ಸ್‌ ವಿಶೇಷ ಪೂಜೆ
ದರ್ಶನ್‌ ಬಿಡುಗಡೆಗಾಗಿ ಫ್ಯಾನ್ಸ್‌ ವಿಶೇಷ ಪೂಜೆ: ಬೂದುಕುಂಬಳಕಾಯಿ ದೀಪ ಬೆಳಗಿಸಿ ಪ್ರಾರ್ಥನೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್‌ ಆಗಿರುವ ದರ್ಶನ್‌ ಅವರ ಬೇಗ ಬಿಡುಗಡೆಗಾಗಿ ಅಭಿಮಾನಿಗಳು ತಂಗನಹಳ್ಳಿ ಕಾಳಿಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 18ರಂದು, ಅನಂತ ಪೂರ್ಣಿಮೆಯಂದು, ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕಾಳಿಕಾಂಬ ದೇವಾಲಯದಲ್ಲಿ ಬೂದುಕುಂಬಳಕಾಯಿ ದೀಪ ಬೆಳಗಿಸಿ, ಶಕ್ತಿ ದೇವಿಯನ್ನು ಭಕ್ತಿಯಿಂದ ಪೂಜಿಸಿದರು. ಅಭಿಮಾನಿಗಳು ದೇವಿಯ ಆರಾಧನೆ ಮಾಡಿ, ದರ್ಶನ್‌ ಅವರು ಬೇಗ ಜೈಲಿನಿಂದ ಬಿಡುಗಡೆ ಆಗಲಿ ಎಂದು ಪ್ರಾರ್ಥಿಸಿದರು. ಇಡೀ ರಾತ್ರಿ ಬೂದುಕುಂಬಳಕಾಯಿ ದೀಪ ಆರದಂತೆ ಕಾವಲು ಕಾಯ್ದು, ವಿಶೇಷ ಆರತಿ ಮಾಡಿದರು.