Back to Top

‘ಬಿಗ್ ಬಾಸ್’ ಟೀಮ್ ಜೊತೆ ಅಪ್‌ಡೇಟ್ ಹೊತ್ತು ತರುತ್ತಿದ್ದಾರೆ ಸುದೀಪ್- ಏನದು?

SSTV Profile Logo SStv September 23, 2024
ಬಿಗ್ ಬಾಸ್ ಅಪ್‌ಡೇಟ್
ಬಿಗ್ ಬಾಸ್ ಅಪ್‌ಡೇಟ್
‘ಬಿಗ್ ಬಾಸ್’ ಟೀಮ್ ಜೊತೆ ಅಪ್‌ಡೇಟ್ ಹೊತ್ತು ತರುತ್ತಿದ್ದಾರೆ ಸುದೀಪ್- ಏನದು?‘ಬಿಗ್ ಬಾಸ್ ಕನ್ನಡ 11’ಗೆ ಕೌಂಟ್‌ಡೌನ್ ಶುರುವಾಗಿದೆ ‘ಬಿಗ್ ಬಾಸ್ ಕನ್ನಡ 11’ಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇದೇ ಸೆ.29ಕ್ಕೆ ಶೋ ಅದ್ಧೂರಿಯಾಗಿ ಆಗಿ ಲಾಂಚ್ ಆಗಲಿದೆ. ಶೋ ಚಾಲನೆಗೂ ಮುನ್ನ ಬಿಗ್ ಬಾಸ್ ತಂಡದ ಜೊತೆ ಬಿಗ್ ಅಪ್‌ಡೇಟ್‌ವೊಂದನ್ನು ಸುದೀಪ್ ಹೊತ್ತು ತರುತ್ತಿದ್ದಾರೆ. ಹೊಸ ಸೀಸನ್ ಪ್ರಾರಂಭಕ್ಕೆ ಬಿಗ್ ಬಾಸ್ ತಂಡ ತೆರೆಮರೆಯಲ್ಲಿ ಎಲ್ಲ ರೀತಿಯಲ್ಲೂ ತಯಾರಿ ಮಾಡಿಕೊಳ್ಳುತ್ತಿದೆ. ಈಗ ಬಿಗ್ ಬಾಸ್ ತಂಡದಿಂದ ಸುದ್ದಿಗೋಷ್ಠಿ ಆಯೋಜಿಸಲಾಗಿದೆ. ಇಂದು 3 ಗಂಟೆ ಸುಮಾರಿಗೆ ಬಿಗ್ ಬಾಸ್ ಸೀಸನ್ 11ರ ಬಗ್ಗೆ ಅಧಿಕೃತ ಚಾಲನೆ ಸಿಗಲಿದೆ. ಈ ಸುದ್ದಿಗೋಷ್ಠಿಯಲ್ಲಿ ಸುದೀಪ್ ಕೂಡ ಭಾಗಿಯಾಗಲಿದ್ದಾರೆ. ಹಲವು ವಿಚಾರಗಳ ಕುರಿತು ನಟ ಮಾತನಾಡಲಿದ್ದಾರೆ. ಮೊದಲ ಸೀಸನ್‌ನಿಂದ ಹಿಡಿದು ಹತ್ತು ಸೀಸನ್‌ಗಳು ಯಶಸ್ವಿಯಾಗಿ ಪ್ರಸಾರ ಕಂಡಿದೆ. ಇದೀಗ ಬಿಗ್ ಬಾಸ್ ಶೋ 11ನೇ ಸೀಸನ್‌ಗೆ ಕಾಲಿಟ್ಟಿದೆ. ಈಗಾಗಲೇ ಪ್ರೋಮೋಗಳ ಮೂಲಕ ಬಿಗ್ ಬಾಸ್ ಸೀಸನ್ 11ರ ಮೇಲೆ ಫ್ಯಾನ್ಸ್‌ಗೆ ಸಾಕಷ್ಟು ನಿರೀಕ್ಷೆಯಿದೆ. ಜೊತೆಗೆ ಈ ಬಾರಿ ಸುದೀಪ್ ಕಾರ್ಯಕ್ರಮ ನಿರೂಪಣೆ ಮಾಡ್ತಿಲ್ಲ ಅನ್ನೋ ಸುದ್ದಿಯೂ ಹರಿದಾಡಿತ್ತು. ಆ ನಂತರ ಪ್ರೋಮೋದಲ್ಲಿ ನಟನ ಆಗಮನದ ಮೂಲಕ ವದಂತಿಗಳಿಗೆ ಬ್ರೇಕ್‌ ಬಿದ್ದಿತ್ತು. ಅಂದಹಾಗೆ, ಬಿಗ್ ಬಾಸ್‌ಗೆ ಬರಲಿರುವ ಕೆಲ ಸ್ಪರ್ಧಿಗಳ ಹೆಸರು ಸದ್ದು ಮಾಡುತ್ತಿದೆ. ಮೋಕ್ಷಿತಾ ಪೈ, ಹುಲಿ ಕಾರ್ತಿಕ್, ಸುಕೃತಾ ನಾಗ್, ಕಿರುತೆರೆ ನಟಿ ಅಮೂಲ್ಯ, ಭವ್ಯಾ ಗೌಡ, ವರ್ಷಾ ಕಾವೇರಿ ಸೇರಿದಂತೆ ಅನೇಕರು ಹೆಸರು ಚಾಲ್ತಿಯಲ್ಲಿದೆ. ಯಾರೆಲ್ಲಾ ದೊಡ್ಮನೆ ಬರುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಶೋ ಶುರುವಾದ್ಮೇಲೆ ಎಲ್ಲದ್ದಕ್ಕೂ ಉತ್ತರ ಸಿಗಲಿದೆ.