‘ರಿಚ್ಚಿ’ ಸಿನಿಮಾ ತಂಡದ ಅಸಮಾಧಾನ: ನಟಿ ರಮೋಲಾ ವಿರುದ್ಧ ನಿರ್ಮಾಪಕ ಹೇಮಂತ್ ಆರೋಪಗಳ ಮಳೆ


ಸಿನಿಮಾ ಜಗತ್ತಿನಲ್ಲಿ ನಿರ್ಮಾಪಕರು ತಮ್ಮ ಶ್ರಮ, ಸಮಯ ಮತ್ತು ಹಣ ಹೂಡಿ ಚಿತ್ರವನ್ನು ಪ್ರೇಕ್ಷಕರ ಮುಂದಿರಿಸುತ್ತಾರೆ. ಆದರೆ ಚಿತ್ರ ರಿಲೀಸ್ ಹಂತಕ್ಕೆ ಬಂದು ಪ್ರಚಾರ ಕಾರ್ಯದಲ್ಲಿ ಮುಖ್ಯ ಕಲಾವಿದರು ಕೈಜೋಡಿಸದಿದ್ದರೆ ನಿರ್ಮಾಪಕರಿಗೆ ಅದು ದೊಡ್ಡ ನೋವು. ಇದೇ ರೀತಿಯ ಸ್ಥಿತಿಯನ್ನು ಎದುರಿಸುತ್ತಿರುವವರು ‘ರಿಚ್ಚಿ’ ಸಿನಿಮಾದ ನಿರ್ಮಾಪಕ ಹಾಗೂ ನಟ ಹೇಮಂತ್.
‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ರಿಯಾಲಿಟಿ ಶೋ ಮೂಲಕ ಪರಿಚಿತರಾದ ರಮೋಲಾ, ‘ರಿಚ್ಚಿ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ ಸಿನಿಮಾ ರಿಲೀಸ್ ಹಂತಕ್ಕೆ ಬಂದಾಗ, ಪ್ರಚಾರ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸದೇ ಇರುವುದೇ ನಿರ್ಮಾಪಕರ ಮೊದಲ ಅಸಮಾಧಾನ.
“ನಾಯಕಿ ಅಂದಮೇಲೆ ಸಿನಿಮಾಗೆ ಸಪೋರ್ಟ್ ಮಾಡಲೇಬೇಕು. ನಾವು ಎಲ್ಲಾ ರೀತಿಯಿಂದಲೂ ಅವರಿಗೆ ಸಹಾಯ ಮಾಡಿದ್ದೇವೆ. ಆದರೆ ಅವರು ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಲ್ಲ.” ನಂಬರ್ ಬ್ಲಾಕ್ & ಚೆಕ್ ಬೌನ್ಸ್ ಆರೋಪ, ನಿರ್ಮಾಪಕ ಹೇಮಂತ್ ಮತ್ತಷ್ಟು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ರಮೋಲಾ ತಮ್ಮ ಫೋನ್ ನಂಬರ್ ಬ್ಲಾಕ್ ಮಾಡಿರುವುದು, ನೀಡಿದ ಚೆಕ್ ಬೌನ್ಸ್ ಆಗಿರುವುದು, ಇವು ನಿರ್ಮಾಪಕರಿಗೆ ಆಕ್ರೋಶ ತರಿಸಿದೆ.
ಅವರು ಹೇಳಿದಂತೆ, “ನಾನು ಫೋನ್ ಮಾಡಿದರೆ ಎತ್ತಲ್ಲ. ನಂಬರ್‌ನ್ನೇ ಬ್ಲಾಕ್ ಮಾಡಿದ್ದಾರೆ. ಪೇಮೆಂಟ್ ಕೊಟ್ಟಾಗ ಬೇಕು ಬೇಕು ಅಂತ ಚೆಕ್ ತೆಗೆದುಕೊಂಡರು, ಆದರೆ ಅದು ಬೌನ್ಸ್ ಆಯಿತು.” ‘ರಿಚ್ಚಿ’ ಸಿನಿಮಾದಲ್ಲಿ ಮತ್ತೊಬ್ಬ ನಾಯಕಿಯಾಗಿ ಮಾನ್ವಿತಾ ಹರೀಶ್ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ಮಾಪಕರ ಪ್ರಕಾರ, ಅವರು ಸಿನಿಮಾದ ಪ್ರಮೋಷನ್‌ಗಾಗಿ ಸದಾ ಸಹಕಾರ ನೀಡಿದ್ದಾರೆ. “ರಮೋಲಾಗಿಂತ ಮಾನ್ವಿತಾ ಚೆನ್ನಾಗಿದ್ದಾರೆ. ಅವರೇ ಪ್ರಮೋಷನ್‌ಗಾಗಿ ಐಡಿಯಾ ಕೊಡುತ್ತಾರೆ” ಎಂದು ಹೇಮಂತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ವಿವಾದ ಈಗ ಕೇವಲ ಮಾಧ್ಯಮ ಮಟ್ಟದಲ್ಲೇ ಸೀಮಿತವಾಗಿರದೆ ಫಿಲ್ಮ್ ಚೇಂಬರ್‌ಗೆ ತಲುಪಿದೆ. ಹೇಮಂತ್ ಅವರು ಅಧಿಕೃತವಾಗಿ ದೂರು ಸಲ್ಲಿಸಿದ್ದು, ಸಮಸ್ಯೆ ಪರಿಹಾರವಾಗಲಿ ಎಂಬ ನಿರೀಕ್ಷೆ ಹೊಂದಿದ್ದಾರೆ. “ಒಬ್ಬ ನಿರ್ಮಾಪಕ ಶ್ರಮಪಟ್ಟು ದುಡ್ಡು ತಂದು ಸಿನಿಮಾ ಮಾಡುತ್ತಾರೆ. ಅದಕ್ಕೆ ನಟರು ಸಹಕಾರ ಕೊಡಲೇಬೇಕು. ಇಲ್ಲದಿದ್ದರೆ ಯಾವ ನಿರ್ಮಾಪಕರಿಗೂ ಬೇಜಾರಾಗಬಾರದು” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ರಿಚ್ಚಿ’ ಸಿನಿಮಾ ಅಕ್ಟೋಬರ್–ನವೆಂಬರ್ ವೇಳೆಗೆ ರಿಲೀಸ್ ಆಗಲಿದೆ. ಆದರೆ ಇದರ ಪ್ರಚಾರಕ್ಕೆ ಸಂಬಂಧಿಸಿದ ಈ ವಿವಾದ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ನಟಿ ರಮೋಲಾ ಅವರ ಮೌನ ಮುಂದುವರಿಯುತ್ತದೆಯಾ, ಅವರು ಸಿನಿಮಾ ತಂಡಕ್ಕೆ ಕೈಜೋಡಿಸುತ್ತಾರೆಯಾ ಎಂಬುದು ಈಗ ನೋಡಬೇಕಾದ ವಿಷಯ.
Related posts
Recent posts
Trending News
ಹೆಚ್ಚು ನೋಡಿ“ಇಂದು ನನ್ನ ಜೀವನದ ವಿಶೇಷ ದಿನ” – ಮೊದಲ ಸಿನಿಮಾ ಬಿಡುಗಡೆ ದಿನವನ್ನು ಆಚರಿಸಿದ ಕೆಂಡಸಂಪಿಗೆ ಹೀರೋ!
