Back to Top

ಪೌರಕಾರ್ಮಿಕರ ನೋವಿಗೆ ಧ್ವನಿ ನೀಡಿದ ‘ರಾಮಾ ಅಂಡ್ ರಾಮು’ ಟ್ರೈಲರ್ ಬಿಡುಗಡೆ!

SSTV Profile Logo SStv September 5, 2025
‘ರಾಮಾ ಅಂಡ್ ರಾಮು’ ಟ್ರೈಲರ್ ಬಿಡುಗಡೆ
‘ರಾಮಾ ಅಂಡ್ ರಾಮು’ ಟ್ರೈಲರ್ ಬಿಡುಗಡೆ

ಪೌರಕಾರ್ಮಿಕರ ಸಮಸ್ಯೆ ಕುರಿತಾದ ಚಂದ್ರು ಓಬಯ್ಯ ನಟನೆ, ನಿರ್ದೇಶನದ ಚಿತ್ರ ಯೂ ಟರ್ನ್-2, ಕರಿಮಣಿ ಮಾಲೀಕ ಚಿತ್ರಗಳ ಖ್ಯಾತಿಯ ನಿರ್ದೇಶಕ  ಚಂದ್ರು ಓಬಯ್ಯ ಇದೀಗ ಸಾಮಾಜಿಕ ಕಳಕಳಿ ಇರುವ ರಾಮಾ ಅಂಡ್ ರಾಮು  ಚಿತ್ರವನ್ನು  ನಿರ್ದೇಶನ ಮಾಡುವ ಜತೆಗೆ ನಿರ್ಮಾಣ ಕೂಡ ಮಾಡಿದ್ದಾರೆ‌. ಜತೆಗೆ ಚಿತ್ರದಲ್ಲಿ ಪೌರಕಾರ್ಮಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟೀಸರ್  ಬಿಡುಗಡೆ ಹಾಗೂ ಪತ್ರಿಕಾಗೋಷ್ಟಿ  ಇತ್ತೀಚೆಗೆ ನಡೆಯಿತು. ಪೌರ ಕಾರ್ಮಿಕರ ದಿನ ನಿತ್ಯ ಎದುರಿಸುತ್ತಿರುವ ಸಮಸ್ಯೆಗಳು, ಈ ಹಂತದಲ್ಲಿ ನಾಗರೀಕರ ಪಾತ್ರದ ಬಗ್ಗೆ ಈ ಚಿತ್ರದಲ್ಲಿ ಹೇಳಲಾಗಿದೆ.  

ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರು ಓಬಯ್ಯ, ಈ ಚಿತ್ರವನ್ನು ವರ್ಷದ ಹಿಂದೆ ಆರಂಭಿಸಿದ್ದೆ. ಒಮ್ಮೆ ಫೇಸ್ ಬುಕ್ ನಲ್ಲಿ ನೋಡಿದ ವಿಡಿಯೋ ಈ ಸಿನಿಮಾವಾಗಲು ಪ್ರೇರಣೆ. ನಮ್ಮ ಪರಿಸರ, ರಸ್ತೆಯನ್ನು ಸ್ವಚ್ಚಗೊಳಿಸುವ ಪೌರಕಾರ್ಮಿಕ ಮಹಿಳೆಯೊಬ್ಬಳು ಮನೆಯ ಮುಂದೆ ನಿಂತು  ನೀರು ಕೇಳಿದಾಗ ಆ ಮನೆಯವರು ನಡೆದುಕೊಂಡ ರೀತಿ ಕಂಡು  ನನ್ನ ಮನಸಿಗೆ ತುಂಬಾ  ಬೇಸರವಾಯಿತು. ಅದೇ ಘಟನೆ  ಇಟ್ಟುಕೊಂಡು ಒಂದು ಕಾದಂಬರಿ ಬರೆದೆ.  ನಂತರ ಅದನ್ನೇ ಈ  ಸಿನಿಮಾ ಮಾಡಿದ್ದೇನೆ. ನಮ್ಮ ಪರಿಸರವನ್ನು ಸ್ವಚ್ಚ ಮಾಡುವವರನ್ನು ನಾವೇ ಗೌರವಿಸದಿದ್ದರೆ ಹೇಗೆ ? ಒಂದು ಟೀಮ್ ಕಟ್ಟಿಕೊಂಡು ಈ ಸಿನಿಮಾ ಮಾಡಿದೆ. ಹುಟ್ಟಿದಮೇಲೆ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕೆಂದು ಮೆಸೇಜ್ ಕೊಡುವ ಈ  ಚಿತ್ರ ನಿರ್ಮಿಸಿದ್ದೇನೆ. ಈಗಾಗಲೇ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದ್ದು , ಸೆನ್ಸಾರ್ ನಿಂದ ಯು/ಎ ಪ್ರಮಾಣಪತ್ರ ಪಡೆದಿದೆ. ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದರು. ವೇದಿಕೆಯಲ್ಲಿ ಚಿತ್ರದ ನಾಯಕಿ ಬೆಳಗಾವಿ ಮೂಲದ ಸೌಮ್ಯ, ಪೊಲೀಸ್ ಪಾತ್ರ ಮಾಡಿರುವ ನಾಗೇಂದ್ರ ಅರಸ್, ನಟರಾದ ಮೂಗು ಸುರೇಶ್ ,  ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ನಾರಾಯಣ ಸೇರಿದಂತೆ ಅನೇಕರು ಹಾಜರಿದ್ದರು.