ಕೋರ್ಟ್ನಲ್ಲಿ ಬಿಗ್ ಟ್ವಿಸ್ಟ್: ದರ್ಶನ್, ಪವಿತ್ರಾ ಗೌಡಗೆ ಮರಣದಂಡನೆ ಕೊಡಬೇಕು ಎಂದು ಅನಾಮಿಕ ಮನವಿ


ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬೇರೆ ಜೈಲಿಗೆ ಶಿಫ್ಟ್ ಮಾಡುವ ವಿಚಾರ ಹಾಗೂ ಬೆಡ್‌ಶೀಟ್–ದಿಂಬು ನೀಡುವ ಕುರಿತು ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಅಚ್ಚರಿಯ ಟ್ವಿಸ್ಟ್ ಸಿಕ್ಕಿದೆ.
ಈ ವಿಚಾರಣೆಯ ತೀರ್ಪನ್ನು ಸೆಪ್ಟೆಂಬರ್ 9ಕ್ಕೆ ಕಾಯ್ದಿರಿಸಲಾಗಿದೆ. ಈ ವೇಳೆ ಕೋರ್ಟ್‌ಗೆ ಅನಾಮಿಕ ವ್ಯಕ್ತಿ ಎಂಟ್ರಿ ಕೊಟ್ಟು, ದರ್ಶನ್, ಪವಿತ್ರಾ ಗೌಡ ಸೇರಿ 17 ಆರೋಪಿಗಳಿಗೆ ಮರಣದಂಡನೆ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾನೆ.
ಅಲ್ಲದೇ, ಅವರಿಗೆ ಜಾಮೀನು (ಬೆಲ್) ನೀಡಬಾರದು ಎಂದೂ ಒತ್ತಾಯಿಸಿದ್ದಾನೆ. ಯಾರು ನೀವು ಎಂದು ಕೋರ್ಟ್ ಕೇಳಿದಾಗ, "ನಾನು ರವಿ ಬೆಳಗೆರೆ ಕಡೆಯವನು" ಎಂದು ಆತ ಉತ್ತರಿಸಿದ.
ಆದರೆ, ಜಡ್ಜ್ ಸ್ಪಷ್ಟವಾಗಿ "ನಿಮ್ಮ ಅರ್ಜಿ ಸರ್ಕಾರದ ಮೂಲಕ ಬರುವುದು ಮಾತ್ರ ಮಾನ್ಯ" ಎಂದು ಹೇಳಿ, ಅರ್ಜಿ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.
Trending News
ಹೆಚ್ಚು ನೋಡಿ
ಟ್ರೆಂಡಿಂಗ್ ಸುದ್ದಿ
‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
