ಅಣ್ಣಾವ್ರ ಜೇಮ್ಸ್ ಬಾಂಡ್ ಸ್ಟೈಲ್ ಮತ್ತೆ ಬೆಳ್ಳಿತೆರೆಗೆ – ಶಿವರಾಜ್ ಕುಮಾರ್ ರೆಟ್ರೊ ಲುಕ್ ವೈರಲ್


ಡಾ. ರಾಜ್ ಕುಮಾರ್ ಅವರು ತಮ್ಮ ಕಾಲದಲ್ಲಿ ಹಲವು ಸ್ಪೈ ಸಿನಿಮಾಗಳಲ್ಲಿ ನಟಿಸಿ ಕನ್ನಡದ ಜೇಮ್ಸ್ ಬಾಂಡ್ ಎಂದು ಕರೆಯಿಸಿಕೊಂಡಿದ್ದರು. ‘ಜೇಡರ ಬಲೆ’, ‘ಆಪರೇಷನ್ ಡೈಮೆಂಟ್ ರಾಕೆಟ್’, ‘ಗೋವಾನಲ್ಲಿ ಸಿಐಡಿ’ ಮುಂತಾದ ಸಿನಿಮಾಗಳಲ್ಲಿ ಸೂಟ್–ಬೂಟ್ ಧರಿಸಿ ಕೈಯಲ್ಲಿ ಗನ್ ಹಿಡಿದು ರಾಜ್ ಕುಮಾರ್ ತಮ್ಮದೇ ಆದ ಸ್ಟೈಲ್ನಲ್ಲಿ ಬೆರಗುಗೊಳಿಸಿದ್ದರು. ಈಗ ಆ ಹಾದಿಯಲ್ಲೇ ಅವರ ಪುತ್ರ ಶಿವರಾಜ್ ಕುಮಾರ್ ಕೂಡಾ ತಮ್ಮ ಹೊಸ ಸಿನಿಮಾದಲ್ಲಿ ಅದೇ ರೀತಿಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಕೆಲವು ಫೋಟೋಗಳಲ್ಲಿ ಶಿವರಾಜ್ ಕುಮಾರ್ ಅವರು ರೆಟ್ರೊ ಶೈಲಿಯ ಸೂಟ್–ಬೂಟ್ ಧರಿಸಿ, ಕೈಯಲ್ಲಿ ರಿವಾಲ್ವರ್ ಹಿಡಿದು ನಿಂತಿರುವ ಬೆರಗುಗೊಳಿಸಿತು. ಅಣ್ಣಾವ್ರ ಸ್ಪೈ ಸಿನಿಮಾಗಳ ನೆನಪು ತರಿಸುವ ಈ ಲುಕ್, ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟಿಸಿದೆ. ಈ ಲುಕ್ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಎಂಬ ಹೊಸ ಸಿನಿಮಾದದ್ದು.
‘ಸಪ್ತ ಸಾಗರದಾಚೆ ಎಲ್ಲೊ’ ಮೂಲಕ ತನ್ನದೇ ಆದ ಶೈಲಿಯಲ್ಲಿ ಸಿನಿಮಾ ಮಾಡುವುದನ್ನು ತೋರಿಸಿದ್ದ ಹೇಮಂತ್ ಎಂ. ರಾವ್, ಈಗ ಈ ರೆಟ್ರೊ ಮಾದರಿಯ ಸ್ಪೈ ಥ್ರಿಲ್ಲರ್‌ಗೆ ನಿರ್ದೇಶನ ಮಾಡುತ್ತಿದ್ದಾರೆ. ಅವರು ಹೇಳುವಂತೆ, “ಈ ಚಿತ್ರ ಇಂದಿನ ಪೀಳಿಗೆಯನ್ನು ಆಕರ್ಷಿಸುವುದರ ಜೊತೆಗೆ ಹಳೆಯ ಪೀಳಿಗೆಯನ್ನು ನೆನಪಿನ ಹಾದಿಯಲ್ಲಿ ಕರೆದೊಯ್ಯಲಿದೆ. ನಾವು ವಿಭಿನ್ನ ಜಗತ್ತನ್ನು ಸೃಷ್ಟಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ಡಾಲಿ ಧನಂಜಯ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಧನಂಜಯ್ ಸಹ ರೆಟ್ರೊ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಬೃಹತ್ ಸೆಟ್ ನಿರ್ಮಿಸಲಾಗಿದೆ. ಬರೋಬ್ಬರಿ 100 ದಿನಗಳ ಕಾಲ ಈ ಸೆಟ್‌ನಲ್ಲಿ ಶೂಟಿಂಗ್ ನಡೆಯಲಿದ್ದು, ಅದ್ಭುತ ದೃಶ್ಯಾವಳಿಗಳನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಲಿದ್ದಾರೆ.
ತಾಂತ್ರಿಕ ತಂಡ:
- ನಿರ್ಮಾಪಕರು – ವೈಶಾಕ್ ಜೆ. ಗೌಡ (ವೈಶಾಕ್ ಜೆ. ಫಿಲ್ಮ್ಸ್)
- ಸಂಗೀತ – ಚರಣ್ ರಾಜ್
- ಛಾಯಾಗ್ರಹಣ – ಅದ್ವೈತ ಗುರುಮೂರ್ತಿ
- ಕಲಾ ನಿರ್ದೇಶನ – ವಿಶ್ವಾಸ್ ಕಶ್ಯಪ್
‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ಶಿವಣ್ಣನಿಗೆ ಮಾತ್ರವಲ್ಲ, ಕನ್ನಡ ಸಿನಿಪ್ರಿಯರಿಗೆ ದೊಡ್ಡ ಗಿಫ್ಟ್ ಆಗಲಿದೆ ಎಂಬ ನಿರೀಕ್ಷೆ ಮೂಡಿಸಿದೆ. ಅಣ್ಣಾವ್ರ ಜೇಮ್ಸ್ ಬಾಂಡ್ ಶೈಲಿಯನ್ನು ಮರುಕಳಿಸುತ್ತಿರುವ ಶಿವಣ್ಣ, ಧನಂಜಯ್ ಜೊತೆಗೆ ಹೇಮಂತ್ ರಾವ್ ನಿರ್ದೇಶನದ ಈ ಸಿನಿಮಾ ಕನ್ನಡದಲ್ಲಿ ಹೊಸ ಸ್ಪೈ ಜಗತ್ತನ್ನು ತೆರೆದಿಡಲಿದೆ.
Trending News
ಹೆಚ್ಚು ನೋಡಿಅಣ್ಣಾವ್ರ ಜೇಮ್ಸ್ ಬಾಂಡ್ ಸ್ಟೈಲ್ ಮತ್ತೆ ಬೆಳ್ಳಿತೆರೆಗೆ – ಶಿವರಾಜ್ ಕುಮಾರ್ ರೆಟ್ರೊ ಲುಕ್ ವೈರಲ್

ಮಾರ್ಕ್’ ಚಿತ್ರದ ಹೊಸ ಹಾಡಿನ ಅಪ್ಡೇಟ್ ಹಂಚಿಕೊಂಡ ಕಿಚ್ಚ ಸುದೀಪ್ – ಶೀಘ್ರದಲ್ಲೇ ಲಿರಿಕಲ್ ವಿಡಿಯೋ ರಿಲೀಸ್
