ಶ್ರೀ ವಿದ್ಯಾಭೂಷಣ್ ಮೊದಲ ಬಾರಿಗೆ ಸಿನಿಮಾಕ್ಕೆ ಹಾಡಿದ ಭಕ್ತಿ ಗೀತೆ – ಸುಧೀರ್ ಅತ್ತಾವರ್ ಸಾಹಿತ್ಯ!


ಸಹಸ್ರಾರು ಭಕ್ತಿ ಗೀತೆಗಳನ್ನು ಭಕ್ತಿ ಪರವಶತೆಯಿಂದ ಹಾಡಿ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಶ್ರೀ ವಿದ್ಯಾಭೂಷಣ್ ರವರು ಸಾಹಿತ್ಯ ಅಕಾಡಮಿ ಪುರಸ್ಕ್ರತ ಸಾಹಿತಿ-ನಿರ್ದೇಶಕ ಸುಧೀರ್ ಅತ್ತಾವರ್ ಬರೆದಿರುವ "ಆದಿ ಮಹಾ ಶಕ್ತಿ ಮಹಾಮಾಯಿಯೇ..." ಎನ್ನುವ ಹಾಡನ್ನು ಪ್ರಪ್ರಥಮ ಬಾರಿಗೆ ಸಿನಿಮಾಕ್ಕಾಗಿ ಹಾಡಿರುತ್ತಾರೆ.ಕನಕ ದಾಸ, ಪುರಂದರ ದಾಸ, ತ್ಯಾಗರಾಜ...ಇಂತಹ ದಾಸ ಶ್ರೇಷ್ಠರ, ಋಷಿ-ಮುನಿಗಳ ಸಹಸ್ರಾರು ಭಕ್ತಿಗೀತೆಗಳನ್ನು ಹಾಡಿರುವ ವಿದ್ಯಾಭೂಷಣ್ ರವರು ಭಕ್ತಿ ಸಾಹಿತ್ಯ ಮೆಚ್ಚಿ ಹಾಡಿರುವುದು ಧನ್ಯತಾ ಭಾವ ಮೂಡಿಸಿದೆ ಎಂದು ಗೀತೆ ರಚನೆಗಾರ ಸುಧೀರ್ ತಿಳಿಸಿರುತ್ತಾರೆ.
"ಮಹಾಮಯಿ" ಯಶೋದೆಯ ಮಗಳು. ಕ್ರಷ್ಣ ನನ್ನು ಉಳಿಸಲು ಕಂಸನಿಂದ ಶಿರಚ್ಛೇದ ಕ್ಕೊಳಗಾಗಿ, ಕ್ರಷ್ಣ ನನ್ನು ರಕ್ಷಿಸುವ ತಾತ್ಪರ್ಯ ಉಳ್ಳ ಈ ಹಾಡಿನಲ್ಲಿ "ಮಹಾಮಯಿ"ಯ ವರ್ಣನೆಯ ಅಂಶವಿದೆ. ಹಾಡಿನ ಲಿರಿಕಲ್ ಆಡಿಯೋ ಬಿಡುಗಡೆಯಾಗಿ ದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನ ವಿರುವ ಪಿದಾಯಿ ಚಿತ್ರವನ್ನು.ರಮೇಶ್ ಶೆಟ್ಟಿಗಾರ್ ಎನ್ನುವವರು ನಿರ್ಮಿಸಿರುತ್ತಾರೆ.
Trending News
ಹೆಚ್ಚು ನೋಡಿ“ಇಂದು ನನ್ನ ಜೀವನದ ವಿಶೇಷ ದಿನ” – ಮೊದಲ ಸಿನಿಮಾ ಬಿಡುಗಡೆ ದಿನವನ್ನು ಆಚರಿಸಿದ ಕೆಂಡಸಂಪಿಗೆ ಹೀರೋ!
