ಎರಡನೇ ಮದುವೆಗೆ ರೆಡಿಯಾದರಾ ನಿವೇದಿತಾ ಗೌಡ? ನಿವೇದಿತಾ ಮತ್ತೆ ಪ್ರೀತಿಯಲ್ಲಿ?


ಸ್ಯಾಂಡಲ್ವುಡ್ನ ಬಾರ್ಬಿ ಡಾಲ್ ಎಂದೇ ಖ್ಯಾತಿ ಪಡೆದಿರುವ ನಿವೇದಿತಾ ಗೌಡ ಮತ್ತೊಮ್ಮೆ ಪ್ರೀತಿಯ ಸುದ್ದಿಯಿಂದ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಪ್ರೀತಿ ಮತ್ತು ದಾಂಪತ್ಯ ಜೀವನದಲ್ಲಿ ಹಿಂದೆ ಅನುಭವಿಸಿದ ನೋವುಗಳಿಂದ ದೂರ ಸರಿದಿರುವ ಅವರು, ಈಗ ಹೊಸ ಬದುಕಿಗೆ ಕಾಲಿಡುತ್ತಿದ್ದಾರೆ ಎನ್ನುವ ಊಹಾಪೋಹಗಳು ಗಟ್ಟಿಯಾಗುತ್ತಿವೆ.
ಎಲ್ಲರಿಗೂ ತಿಳಿದಂತೆ, ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಇಬ್ಬರೂ ತಮ್ಮ ತಮ್ಮ ಬದುಕಿನಲ್ಲಿ ಮುಂದುವರಿಯಲು ತೀರ್ಮಾನಿಸಿಕೊಂಡಿದ್ದು, ಚಂದನ್ ಶೆಟ್ಟಿ ಈಗ ಸಂಗೀತ ಲೋಕದಲ್ಲಿ ತಮ್ಮ ಪ್ರಯತ್ನಗಳನ್ನು ವಿಸ್ತರಿಸುತ್ತಿದ್ದಾರೆ. ಕ್ರಿಸ್ ಗೇಲ್ ಜೊತೆಗೂಡಿ ಹೊಸ ಹಾಡಿನ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇನ್ನೊಂದೆಡೆ, ನಿವೇದಿತಾ ಗೌಡ ತಮ್ಮ ಪ್ರಯಾಣವನ್ನು ಆನಂದಿಸುತ್ತಿದ್ದಾರೆ. ಪ್ರವಾಸ ಪ್ರಿಯೆಯಾದ ಅವರು, ಈಗ ಅಮೇರಿಕಾದ ಫ್ಲೋರಿಡಾನಲ್ಲಿ ತಮ್ಮ ಸಮಯ ಕಳೆಯುತ್ತಿದ್ದಾರೆ. ಆದರೆ ಅವರ ಇತ್ತೀಚಿನ ಇನ್ಸ್ಟಾಗ್ರಾಂ ಪೋಸ್ಟ್ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.
ಅವರು ಹಂಚಿಕೊಂಡ ಫೋಟೋ ಮತ್ತು ವಿಡಿಯೋದಲ್ಲಿ ಕೈಯಲ್ಲಿ ಪುಷ್ಪಗುಚ್ಛ ಹಿಡಿದು ನಾಚಿಕೊಂಡಂತೆ ಕಾಣಿಸಿಕೊಂಡಿದ್ದಾರೆ. ಅದರ ಜೊತೆಗೆ “28-08-25 ❤️” ಎಂಬ ಕ್ಯಾಪ್ಷನ್ ನೀಡಿರುವುದು ಮತ್ತಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಸಾಮಾನ್ಯವಾಗಿ ಇನ್ಸ್ಟಾಗ್ರಾಂ ಪೋಸ್ಟ್ಗಳಲ್ಲಿ ದಿನಾಂಕವನ್ನು ಉಲ್ಲೇಖಿಸುವುದು ಅಪರೂಪ. ಆದರೆ ಮರೆಯಲಾಗದ ದಿನ ಅಥವಾ ವಿಶೇಷ ಕ್ಷಣವಿದ್ದರೆ ಮಾತ್ರ ಅದು ಕಾಣಿಸುತ್ತದೆ. ಹೀಗಾಗಿ ಅಭಿಮಾನಿಗಳು “ಈ ದಿನಾಂಕ ನಿವೇದಿತಾ ಅವರ ಜೀವನದಲ್ಲಿ ಹೊಸ ತಿರುವಿನ ಸೂಚನೆಯಾ?” ಎಂದು ಪ್ರಶ್ನಿಸುತ್ತಿದ್ದಾರೆ. ಎಮೋಜಿ ಸೇರಿರುವುದರಿಂದ ಹೊಸ ಪ್ರೀತಿ ಅಥವಾ ಎರಡನೇ ಮದುವೆ ಸಾಧ್ಯತೆ ಎಂಬ ಊಹಾಪೋಹಗಳು ಹೆಚ್ಚುತ್ತಿವೆ.
ಇನ್ನೊಂದು ಕುತೂಹಲ ಹುಟ್ಟಿಸಿರುವ ಪ್ರಶ್ನೆ ಎಂದರೆ – ಫ್ಲೋರಿಡಾದಲ್ಲಿ ನಿವೇದಿತಾ ಅವರ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿದವರು ಯಾರು? ಸಾಮಾನ್ಯವಾಗಿ ಅವರ ಆಪ್ತ ಸ್ನೇಹಿತೆ ವಾಣಿ ಅವರ ಜೊತೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಅವರ ಸುಳಿವು ಇಲ್ಲದಿರುವುದರಿಂದ, ಅಭಿಮಾನಿಗಳಲ್ಲಿ ಇನ್ನಷ್ಟು ಅನುಮಾನ ಮೂಡುತ್ತಿದೆ.
ನಿವೇದಿತಾ ಗೌಡ ನಿಜವಾಗಿಯೂ ಎರಡನೇ ಮದುವೆಯ ದಾರಿಯಲ್ಲಿ ಸಾಗುತ್ತಿದ್ದಾರೆವೆಯೇ ಅಥವಾ ಇದು ಕೇವಲ ಅಭಿಮಾನಿಗಳ ಊಹಾಪೋಹವೋ? ಅದನ್ನು ಕಾಲವೇ ಉತ್ತರಿಸಬೇಕಿದೆ. ಆದರೆ ಒಂದು ವಿಚಾರ ಸ್ಪಷ್ಟ ನಿವೇದಿತಾ ಗೌಡ ಅವರ ಜೀವನದ ಪ್ರತಿಯೊಂದು ಹಂತವೂ ಅಭಿಮಾನಿಗಳಲ್ಲಿ ಯಾವಾಗಲೂ ಕುತೂಹಲ ಹುಟ್ಟಿಸುತ್ತಲೇ ಇರುತ್ತದೆ.
Related posts
Recent posts
Trending News
ಹೆಚ್ಚು ನೋಡಿಅಣ್ಣಾವ್ರ ಜೇಮ್ಸ್ ಬಾಂಡ್ ಸ್ಟೈಲ್ ಮತ್ತೆ ಬೆಳ್ಳಿತೆರೆಗೆ – ಶಿವರಾಜ್ ಕುಮಾರ್ ರೆಟ್ರೊ ಲುಕ್ ವೈರಲ್

ಮಾರ್ಕ್’ ಚಿತ್ರದ ಹೊಸ ಹಾಡಿನ ಅಪ್ಡೇಟ್ ಹಂಚಿಕೊಂಡ ಕಿಚ್ಚ ಸುದೀಪ್ – ಶೀಘ್ರದಲ್ಲೇ ಲಿರಿಕಲ್ ವಿಡಿಯೋ ರಿಲೀಸ್

‘ಏಳುಮಲೆ’ ಸಿನಿಮಾ 10 ದಿನಗಳಲ್ಲಿ 3.5 ಕೋಟಿ ಕಲೆಕ್ಷನ್ – ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು!
