Back to Top

“ಅಮೇಝಿಂಗ್ ಪರ್ಸನ್ ದರ್ಶನ್ ಸರ್” – ದರ್ಶನ್ ಬಗ್ಗೆ ಹೃದಯಂಗಮ ಮಾತು ಹಂಚಿಕೊಂಡ ನಿಮಿಕಾ ರತ್ನಾಕರ್

SSTV Profile Logo SStv September 9, 2025
ದರ್ಶನ್ ಬಗ್ಗೆ ಕ್ರಾಂತಿ ನೆನಪು ಹಂಚಿಕೊಂಡ ನಿಮಿಕಾ ರತ್ನಾಕರ್
ದರ್ಶನ್ ಬಗ್ಗೆ ಕ್ರಾಂತಿ ನೆನಪು ಹಂಚಿಕೊಂಡ ನಿಮಿಕಾ ರತ್ನಾಕರ್

ಕ್ರಾಂತಿ ಸಿನಿಮಾದ ಸ್ಪೆಷಲ್ ಸಾಂಗ್‌ನಲ್ಲಿ ದರ್ಶನ್ ಜೊತೆ ಹೆಜ್ಜೆ ಹಾಕಿದ್ದ ನಟಿ ನಿಮಿಕಾ ರತ್ನಾಕರ್, ಆ ಸಂದರ್ಭದ ನೆನಪುಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಈಗ ಅವರು ತಮ್ಮ ಹೊಸ ಸಿನಿಮಾ ಫೀನಿಕ್ಸ್ ಶೂಟಿಂಗ್‌ನಲ್ಲಿದ್ದಾರೆ.

ಓಂ ಪ್ರಕಾಶ್ ರಾವ್ ನಿರ್ದೇಶನದ ಫೀನಿಕ್ಸ್ ಸಿನಿಮಾ ಮಹಿಳಾ ಪ್ರಧಾನ ಕಥಾಹಂದರ ಹೊಂದಿದ್ದು, ಇದರ ಕೊನೆಯ ಹಂತದ ಚಿತ್ರೀಕರಣವನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಮುಗಿಸಲಾಗಿದೆ. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಿಮಿಕಾ, ತಮ್ಮ ಪಾತ್ರ ಹಾಗೂ ಚಿತ್ರೀಕರಣದ ಅನುಭವದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದರು.

ದರ್ಶನ್ ಬಗ್ಗೆ ಹೃದಯಸ್ಪರ್ಶಿ ನೆನಪು, “ದರ್ಶನ್ ಸರ್ ಇರೋದಕ್ಕೂ, ಕೆಲವರು ಅವರನ್ನ ತೋರಿಸೋದಕ್ಕೂ ವ್ಯತ್ಯಾಸವಿದೆ. ಪ್ರತಿದಿನ ನನ್ನನ್ನು ನೋಡಿದ ಕೂಡಲೇ ಅಮ್ಮ ತಿಂಡಿ ಆಯ್ತಾ? ಊಟ ಆಯ್ತಾ? ಅಂತಾ ಕೇಳ್ತಿದ್ರು. ತುಂಬಾ ಕಾಳಜಿಯ, ಅಮೇಝಿಂಗ್ ವ್ಯಕ್ತಿ ದರ್ಶನ್ ಸರ್” ಎಂದು ಅವರು ಕೃತಜ್ಞತೆ ವ್ಯಕ್ತಪಡಿಸಿದರು.

ನಿಮಿಕಾ ಹೇಳಿಕೆಯು ದರ್ಶನ್ ಅಭಿಮಾನಿಗಳ ಹೃದಯಕ್ಕೂ ಹತ್ತಿರವಾಗಿದೆ. ಓಂ ಪ್ರಕಾಶ್ ರಾವ್ ಅವರ 50ನೇ ಚಿತ್ರದಲ್ಲೂ ನಿಮಿಕಾ, ಫೀನಿಕ್ಸ್ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿರುವ ನಿಮಿಕಾ, ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಮುಂದಿನ 50ನೇ ಸಿನಿಮಾದಲ್ಲೂ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.

ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿಕೊಳ್ಳುತ್ತಿರುವ ನಿಮಿಕಾ, ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿರುವುದು ಅವರ ವೃತ್ತಿಜೀವನದ ಹೊಸ ಅಧ್ಯಾಯ.