Back to Top

ಮದುವೆಯಾದ ಕೆಲವೇ ದಿನಗಳಲ್ಲಿ ಮಗು ಮಾಡಿಕೊಳ್ಳುವ ಬಗ್ಗೆ ಹೇಳಿದ ಅನುಶ್ರೀ, ಅಭಿಮಾನಿಗಳಲ್ಲಿ ಕುತೂಹಲ!

SSTV Profile Logo SStv September 10, 2025
ಮಗು ಮಾಡಿಕೊಳ್ಳುವ ಆಸೆ ಹಂಚಿಕೊಂಡ ಅನುಶ್ರೀ
ಮಗು ಮಾಡಿಕೊಳ್ಳುವ ಆಸೆ ಹಂಚಿಕೊಂಡ ಅನುಶ್ರೀ

ಕನ್ನಡದ ಜನಪ್ರಿಯ ಆ್ಯಂಕರ್ ಅನುಶ್ರೀ ಇತ್ತೀಚೆಗೆ ಮದುವೆಯಾದ ಬಳಿಕ ಮತ್ತೆ ತಮ್ಮ ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಇದೀಗ ಒಂದು ವೈರಲ್ ವಿಡಿಯೋ ಅವರ ಖಾಸಗಿ ಜೀವನದ ಕುರಿತಂತೆ ಚರ್ಚೆಗೆ ಕಾರಣವಾಗಿದೆ.

ಅನುಶ್ರೀ ಅವರು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ರೋಷನ್ ಅವರನ್ನು ವಿವಾಹವಾದರು. ಈ ಮದುವೆಗೆ ಅನೇಕ ಸೆಲೆಬ್ರಿಟಿಗಳು ಹಾಜರಿದ್ದರು. ಮದುವೆಯ ನಂತರ ಅನುಶ್ರೀ ಅವರು ತಮ್ಮ ಕೆಲಸಗಳಿಗೆ ಮರಳಿದ್ದು, ಶೋಗಳ ನಿರೂಪಣೆ ಹಾಗೂ ಈವೆಂಟ್‌ಗಳಲ್ಲಿ ಬ್ಯುಸಿ ಆಗಿದ್ದಾರೆ.

ಇತ್ತೀಚೆಗೆ ಜೀ ಕನ್ನಡದಲ್ಲಿ ಪ್ರಸಾರವಾಗುವ ‘ನಾವು ನಮ್ಮವರು’ ಶೋನಲ್ಲಿ ಸ್ಪರ್ಧಿಯಾಗಿದ್ದ ಸಮೀರ್ ಆಚಾರ್ಯ ಹಾಗೂ ಅವರ ಪತ್ನಿ ಶ್ರಾವಣಿಯ ಜೊತೆ ಅನುಶ್ರೀ ಮಾತನಾಡಿದರು. ಈ ವೇಳೆ ಶ್ರಾವಣಿ, ಅನುಶ್ರೀಗೆ “ತಡ ಮಾಡದೇ ಮಗು ಮಾಡಿಕೊಳ್ಳಿ” ಎಂದು ಸಲಹೆ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಅನುಶ್ರೀ ನಾಚಿಕೆಪಟ್ಟು, ನಗುತ್ತಲೇ “ಓಕೆ” ಎಂದರು. ಜೊತೆಗೆ, ತಮಗೆ ಹೆಣ್ಣು ಮಗು ಬೇಕು ಎಂಬ ತಮ್ಮ ಇಚ್ಛೆಯನ್ನು ಹಂಚಿಕೊಂಡರು.

ಈ ವಿಡಿಯೋ ವೈರಲ್ ಆದ ಬಳಿಕ ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಅನುಶ್ರೀ ಅವರ ಪಾಸಿಟಿವ್ ಆಲೋಚನೆಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು “ಮಗು ಮಾಡಿಸಿಕೊಂಡರೆ, ಅವರಿಗೆ ಆ್ಯಂಕರಿಂಗ್‌ಗೇ ಬ್ರೇಕ್ ಕೊಡಬೇಕಾಗಬಹುದು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಅನುಶ್ರೀ ಹಾಗೂ ರೋಷನ್ ಅವರ ನಡುವೆ ಪುನೀತ್ ರಾಜ್‌ಕುಮಾರ್ ಅಭಿಮಾನಿಯಾಗಿರುವ ಸಾಮ್ಯದಿಂದಲೇ ಸ್ನೇಹ ಬೆಳೆದಿತ್ತು. ಆ ಸ್ನೇಹ ನಿಧಾನವಾಗಿ ಪ್ರೀತಿಗೆ ತಿರುಗಿ, ಮದುವೆಯಾದರು. ಸದ್ಯ, ಅನುಶ್ರೀ ಅವರ ಈ ಹೊಸ ವಿಡಿಯೋ ನೆಟ್ಟಿಗರಲ್ಲಿ ಕುತೂಹಲ ಹುಟ್ಟಿಸಿದ್ದು, ಅವರು ಯಾವಾಗ ಕುಟುಂಬದ ಹೊಸ ಸದಸ್ಯರನ್ನು ಬರಮಾಡಿಕೊಳ್ಳುತ್ತಾರೆ ಎಂಬುದೇ ಅಭಿಮಾನಿಗಳ ಕಾತರ ಪ್ರಶ್ನೆಯಾಗಿಸಿದೆ.