Back to Top

‘ಹೂವಿನ ಬಾಣದಂತೆ’ ವೈರಲ್ ಹುಡುಗಿ ಯಾರು? ಅವರ ಮುಂದಿನ ವೈರಲ್ ಹಾಡು ಯಾವುದು?

SSTV Profile Logo SStv September 13, 2025
'ಹೂವಿನ ಬಾಣದಂತೆ' ವೈರಲ್ ಹುಡುಗಿ ನಿತ್ಯಶ್ರೀ
'ಹೂವಿನ ಬಾಣದಂತೆ' ವೈರಲ್ ಹುಡುಗಿ ನಿತ್ಯಶ್ರೀ

ಸೋಶಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ಎಲ್ಲೆಡೆ ಕೇಳಿಸುತ್ತಿರುವ ಹಾಡು ‘ಹೂವಿನ ಬಾಣದಂತೆ’. ‘ಬಿರುಗಾಳಿ’ ಚಿತ್ರದ ಈ ಹಾಡಿಗೆ ಹೊಸ ಜೀವ ತುಂಬಿ ವೈರಲ್ ಮಾಡಿದವರು ಮೈಸೂರಿನ ಬಿಬಿಎ ವಿದ್ಯಾರ್ಥಿನಿ ನಿತ್ಯಶ್ರೀ. ನಿತ್ಯಶ್ರೀ ತಮ್ಮ ಸ್ವಂತ ಸ್ಟೈಲ್ನಲ್ಲಿ ಈ ಹಾಡು ಹಾಡಿದ್ದಾರೆ. ಪಕ್ಕದಲ್ಲಿದ್ದವರು ನಗುತ್ತಿದ್ದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಪೂರ್ಣಗೊಳಿಸಿದರು. ಹಾಡಿನ ಕೊನೆಯಲ್ಲಿ ಎಲ್ಲರೂ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು.

ಆ ವೀಡಿಯೋವನ್ನು ಸ್ನೇಹಿತರು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ ತಕ್ಷಣ ಲಕ್ಷಾಂತರ ವೀಕ್ಷಣೆಗಳು ಸಿಕ್ಕಿವೆ. ಆ ನಿತ್ಯಶ್ರೀ ಯಾರು? ಮೂಲತಃ ಕೆ. ಆರ್. ಪೇಟೆ ತಾಲ್ಲೂಕಿನ ಮಚಿಲೆಕೊಪ್ಪಲು ಗ್ರಾಮದವರು. ಮಹಾರಾಣಿ ಕಾಮರ್ಸ್ ಕಾಲೇಜು, ಮೈಸೂರು ಇಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಹಾಸ್ಟೆಲ್‌ನಲ್ಲಿ ಸ್ನೇಹಿತರಿಗಾಗಿ ಹೀಗೆ ಹಾಡುತ್ತಿರುತ್ತಿದ್ದಂತೆ.

‘ಹೂವಿನ ಬಾಣದಂತೆ’ ಮಾತ್ರವಲ್ಲ, ಆಕಾಶ್ ಚಿತ್ರದ "ನೀನೆ ನೀನೆ" ಹಾಡನ್ನೂ ತಮ್ಮದೇ ಶೈಲಿಯಲ್ಲಿ ಹಾಡಿದ್ದಾರೆ. ಆ ವೀಡಿಯೋ ಅಷ್ಟು ವೈರಲ್ ಆಗದಿದ್ದರೂ ಜನ ಮೆಚ್ಚಿಕೊಂಡಿದ್ದಾರೆ. ಮುಂದೆ ಇನ್ನೂ 4–5 ಹಾಡುಗಳನ್ನು ಇದೇ ರೀತಿ ಹಾಡಿ ಬಿಡುಗಡೆ ಮಾಡುವ ಪ್ಲಾನ್ ಇದ್ದಂತೆ. ಸೋಶಿಯಲ್ ಮೀಡಿಯಾದ ಪ್ರಭಾವ ನಿತ್ಯಶ್ರೀ ಹೆಸರು ಹೇಳಿಕೊಂಡು ಈಗ ಬಹು ಅಕೌಂಟ್‌ಗಳು ಕ್ರಿಯೇಟ್ ಆಗಿವೆ. ‘ಅಮ್ಮು ಗೌಡ’ ಹೆಸರಿನ ಒಂದು ಅಕೌಂಟ್‌ನಲ್ಲಿ ಫಾಲೋವರ್ಸ್‌ಗಳು ಏಕಾಏಕಿ ಹೆಚ್ಚಾಗಿವೆ.

ಇಂತಹ ಪ್ರತಿಭಾವಂತರಿಗೆ ಸೋಶಿಯಲ್ ಮೀಡಿಯಾ ವೇದಿಕೆಯಾಗಿದೆ ಎನ್ನುವುದು ಮತ್ತೆ ಸಾಬೀತಾಗಿದೆ. ಒಂದು ಸಣ್ಣ ವೀಡಿಯೋ ಸಾಕು, ನಿತ್ಯಶ್ರೀ ಮಾದರಿಯವರು ‘ನೆಕ್ಸ್ಟ್ ಸೋಶಿಯಲ್ ಮೀಡಿಯಾ ಸ್ಟಾರ್’ ಆಗುತ್ತಾರೆ. ಇದೀಗ ಎಲ್ಲರೂ ಕೇಳುತ್ತಿರುವ ಪ್ರಶ್ನೆ: ಅವರ ಮುಂದಿನ ವೈರಲ್ ಹಾಡು ಯಾವುದು?