Back to Top

8 ವರ್ಷಗಳ ಮದುವೆ ಜೀವನದ ನಂತರ ನಿರಂಜನ್-ಯಶಸ್ವಿನಿ ದಂಪತಿ ಗುಡ್ ನ್ಯೂಸ್‌!

SSTV Profile Logo SStv September 18, 2025
ಗುಡ್ ನ್ಯೂಸ್‌ ಕೊಡೋಕೆ ಸಜ್ಜಾದ ನಿರಂಜನ್-ಯಶಸ್ವಿನಿ ದಂಪತಿ
ಗುಡ್ ನ್ಯೂಸ್‌ ಕೊಡೋಕೆ ಸಜ್ಜಾದ ನಿರಂಜನ್-ಯಶಸ್ವಿನಿ ದಂಪತಿ

‘ಬಿಗ್ ಬಾಸ್‌ ಕನ್ನಡ ಸೀಸನ್‌ 4’ ಮೂಲಕ ಮನೆಮಾತಾದ ನಟ ಹಾಗೂ ನಿರೂಪಕ ನಿರಂಜನ್‌ ದೇಶಪಾಂಡೆ ಹಾಗೂ ಅವರ ಪತ್ನಿ ಯಶಸ್ವಿನಿ ದೇಶಪಾಂಡೆ ಈಗಾಗಲೇ ಎಂಟು ವರ್ಷಗಳ ವೈವಾಹಿಕ ಜೀವನವನ್ನು ಹಂಚಿಕೊಂಡಿದ್ದಾರೆ. ಇವರ ಮದುವೆಯೇ ವಿಶೇಷವಾಗಿತ್ತು – 2017ರಲ್ಲಿ ರಿಯಾಲಿಟಿ ಶೋನ ಸೆಟ್‌ನಲ್ಲಿಯೇ ಇವರಿಬ್ಬರ ಜೀವನವಾಹಿನಿ ಒಂದಾಯಿತು. ಆದರೆ ಮದುವೆಯಾದ ದಿನದಿಂದಲೂ ಅಭಿಮಾನಿಗಳಿಂದ ಬರುವ ಒಂದೇ ಪ್ರಶ್ನೆ ಎಂದರೆ: “ಗುಡ್ ನ್ಯೂಸ್‌ ಯಾವಾಗ?”

ಇತ್ತೀಚೆಗೆ ಯಶಸ್ವಿನಿ ಅವರು ಜನಪ್ರಿಯ ಶೋ ‘ಅಕ್ಷತಾ ಕಿಚನ್’ ನಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ತಮ್ಮ ಮನೆಯಲ್ಲಿರುವ ನಾಯಿ ಮರಿಯ ಬಗ್ಗೆ ಮಾತನಾಡಿ, “ನಮ್ಮ ಮನೆ ರಾಜಕುಮಾರ, ನಮ್ಮ ಪುಟ್ಟ ದೇವರು” ಎಂದು ಹೇಳಿಕೊಂಡರು. ಅದಾದ ಬಳಿಕ ನಿರೂಪಕಿ ಅಕ್ಷತಾ ಪಾಂಡವಪುರ ಅವರು ನೇರವಾಗಿ ಕೇಳಿದರು “ಮಗು ಪ್ಲ್ಯಾನ್ ಇಲ್ಲವಾ?” ಎಂದು. ಇದಕ್ಕೆ ಯಶಸ್ವಿನಿ ಅವರು candid ಆಗಿ ಉತ್ತರಿಸಿ,

 “ಇದೆ... ಪ್ರತಿ ವರ್ಷವೂ ಈ ವರ್ಷ.. ಈ ವರ್ಷ ಅಂತಾ ಅಂದುಕೊಳ್ಳುತ್ತೇವೆ. ಗೊತ್ತಿಲ್ಲ, ಈ ವರ್ಷ ಅಂದುಕೊಂಡಿದ್ದೇನೆ.” ಎಂದು ಹೇಳಿ ಎಲ್ಲರಲ್ಲೂ ಕುತೂಹಲ ಹುಟ್ಟಿಸಿದ್ದಾರೆ. ಈ ಹೇಳಿಕೆ ಕೇಳಿ ಅಕ್ಷತಾ ಪಾಂಡವಪುರ ಹಾಸ್ಯಮಿಶ್ರಿತವಾಗಿ, “ಮುಂದಿನ ವರ್ಷ ಅಕ್ಷತಾ ಕಿಚನ್ ಯಶಸ್ವಿನಿ ದೇಶಪಾಂಡೆ ಮನೆಗೆ ಬಯಕೆ ತೀರಿಸಲು ಹೋಗುತ್ತೆ” ಎಂದು ಪ್ರತಿಕ್ರಿಯಿಸಿದರು. ಈ ಸಂಭಾಷಣೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಶುಭಾಶಯಗಳ ಮಳೆಗರೆದಿದ್ದಾರೆ.

ನಿರಂಜನ್ ದೇಶಪಾಂಡೆ – ಬಹುಮುಖ ಪ್ರತಿಭೆ, ನಿರಂಜನ್‌ ದೇಶಪಾಂಡೆ ಅವರು ನಟ, ನಿರೂಪಕ, ಬಿಗ್‌ ಬಾಸ್ ಸ್ಪರ್ಧಿ ಎಂಬ ಹತ್ತಾರು ಮುಖಗಳನ್ನು ತೋರಿಸಿದ್ದಾರೆ. ‘ಮಿಲನ’ ಧಾರಾವಾಹಿಯಲ್ಲಿ ಅವರು ಅಭಿನಯಿಸಿದ್ದರು. ‘ಬಾಂಬೆ ಮಿಠಾಯಿ’ ಸಿನಿಮಾದಲ್ಲಿಯೂ ತಮ್ಮ ಅಭಿನಯದ ಮಿಂಚು ತೋರಿಸಿದ್ದರು. ನಿರೂಪಕರಾಗಿ ಹಲವಾರು ಕಾರ್ಯಕ್ರಮಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇನ್ನೊಂದೆಡೆ, ಯಶಸ್ವಿನಿ ದೇಶಪಾಂಡೆ ಅವರು ಭರತನಾಟ್ಯ ಕಲಾವಿದೆ ಆಗಿ ಗುರುತಿಸಿಕೊಂಡಿದ್ದಾರೆ.

ಮದುವೆಯಾಗಿದ್ದು 2017ರಲ್ಲಿ. ಇಂದಿಗೆ 8 ವರ್ಷಗಳ ಸಂತೋಷದ ಜೀವನ ನಡೆಸುತ್ತಿರುವ ಈ ಜೋಡಿ, “ಗುಡ್ ನ್ಯೂಸ್‌ ಯಾವಾಗ?” ಎಂಬ ಪ್ರಶ್ನೆಗೆ ಈ ಬಾರಿ ಸ್ವಲ್ಪ ಖಚಿತವಾದ ಉತ್ತರ ನೀಡಿದಂತಾಗಿದೆ. ಸದ್ಯ, ಯಶಸ್ವಿನಿ ಅವರ ಮಾತು ಅಭಿಮಾನಿಗಳಿಗೆ ಹೊಸ ನಿರೀಕ್ಷೆ ಹುಟ್ಟಿಸಿದೆ. ಬರುವ ದಿನಗಳಲ್ಲಿ ನಿರಂಜನ್-ಯಶಸ್ವಿನಿ ದಂಪತಿಗಳು ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸುತ್ತಾರೆಯೇ ಎಂಬ ಕುತೂಹಲ ಎಲ್ಲೆಡೆ ವ್ಯಕ್ತವಾಗುತ್ತಿದೆ.