Back to Top

"ವಯಸ್ಸೇ ಗೊತ್ತಾಗದ ನಟ" – 61ರಲ್ಲೂ 31ರಂತೆ ಕಾಣ್ತಿರುವ ರಮೇಶ್ ಅರವಿಂದ್ ಹುಟ್ಟುಹಬ್ಬ ಸ್ಪೆಷಲ್!

SSTV Profile Logo SStv September 10, 2025
ರಮೇಶ್ ಅರವಿಂದ್ ಹುಟ್ಟುಹಬ್ಬದ ಸಂಭ್ರಮದಲ್ಲಿ
ರಮೇಶ್ ಅರವಿಂದ್ ಹುಟ್ಟುಹಬ್ಬದ ಸಂಭ್ರಮದಲ್ಲಿ

ಕನ್ನಡ ಸಿನಿರಂಗದ ಪಾಸಿಟಿವ್ ಹೀರೋ ಎಂದೇ ಖ್ಯಾತಿ ಪಡೆದಿರುವ ರಮೇಶ್ ಅರವಿಂದ್ ಇಂದು (ಸೆಪ್ಟೆಂಬರ್ 10) ತಮ್ಮ 61ನೇ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಆದರೆ, ಇವರನ್ನು ನೋಡಿದಾಗ ಯಾರಿಗೂ ಆ ವಯಸ್ಸು ಗೊತ್ತಾಗುವುದಿಲ್ಲ. ದಿನೇ ದಿನೇ ಇನ್ನಷ್ಟು ಯಂಗ್ ಆಗುತ್ತಾ, ಹೊಸ ಉತ್ಸಾಹದೊಂದಿಗೆ, ಹೊಸ ಆಲೋಚನೆಗಳೊಂದಿಗೆ ಮುನ್ನಡೆಯುತ್ತಿದ್ದಾರೆ.

ಸದಾ ಯಂಗ್ ಆಗಿರುವ ರಮೇಶ್ ಅರವಿಂದ್, "ವಯಸ್ಸು ಒಂದು ನಂಬರ್ ಮಾತ್ರ" ಎಂಬ ಮಾತಿನ ಸತ್ಯವಾದ ಉದಾಹರಣೆ ಎಂದರೆ ರಮೇಶ್ ಅರವಿಂದ್. ಮಗಳ ಮದುವೆ ಆದರೂ, ಇವರ ಲುಕ್ ಮತ್ತು ಎನರ್ಜಿ ಇನ್ನೂ ಯುವಕರಿಗಿಂತ ಕಡಿಮೆ ಇಲ್ಲ. ಸದಾ ಪಾಸಿಟಿವಿಟಿ ತುಂಬಿಕೊಂಡಿರುವ ಇವರ ಬಳಿ ನೆಗಟಿವ್ ಎನರ್ಜಿ ಸುಳಿಯುವುದೇ ಇಲ್ಲ. ಪ್ರತಿ ಮಾತಲ್ಲೂ ಸಂತೋಷ, ಪ್ರತಿ ಮಾತಲ್ಲೂ ಒಂದು ಮೌಲ್ಯ ಇಟ್ಟುಕೊಂಡಿರುವ ವ್ಯಕ್ತಿ.

1964 ಸೆಪ್ಟೆಂಬರ್ 10 ರಂದು ತಮಿಳುನಾಡಿನ ಕುಂಭಕೋಣಂನಲ್ಲಿ ಜನಿಸಿದ ರಮೇಶ್, ವಿದ್ಯಾರ್ಥಿ ದಶೆಯಿಂದಲೇ ಪ್ರತಿಭಾವಂತರು. ಇಂಜಿನಿಯರಿಂಗ್ ಓದಿ, ನಂತರ ಸಿನಿರಂಗದಲ್ಲಿ ತಮ್ಮದೇ ಆದ ಹಾದಿ ಹಾದಿದರು. "ಸುಂದರ ಸ್ವಪ್ನಗಳು" (ಕೆ. ಬಾಲಚಂದರ್ ನಿರ್ದೇಶನ) ಇವರ ಮೊದಲ ಚಿತ್ರ. ನಂತರ ಮೌನಗೀತೆ, ಮನೆಯೇ ಮಂತ್ರಾಲಯ, America America, Amruthavarshini ಮುಂತಾದ ಕ್ಲಾಸಿಕ್ ಸಿನಿಮಾಗಳಲ್ಲಿ ಮಿಂಚಿದರು.

ಇತ್ತೀಚೆಗೆ ಜೋಗಿ ಪ್ರೇಮ್ ನಿರ್ದೇಶನದ ಕೆಡಿ, ಹಾಗೂ ಶಿವಾಜಿ ಸುರತ್ಕಲ್ ಸರಣಿಗಳಲ್ಲೂ ನಟಿಸಿದ್ದಾರೆ. ರಮೇಶ್ ಅರವಿಂದ್ ಕೇವಲ ನಟರಷ್ಟೇ ಅಲ್ಲ, ಒಬ್ಬ ಉತ್ತಮ ನಿರ್ದೇಶಕ ಮತ್ತು ಬರಹಗಾರ ಕೂಡ. ರಾಮ ಶಾಮ ಭಾಮ, ಸುಂದರ, ಬಿಸಿ ಬಿಸಿ, ಹೊಂಬಾಳೆ ಮುಂತಾದ ಹಿಟ್ ಸಿನಿಮಾಗಳಿಗೆ ನಿರ್ದೇಶನ ನೀಡಿದ್ದಾರೆ. ಒಟ್ಟು 15ಕ್ಕೂ ಹೆಚ್ಚು ಚಿತ್ರಗಳಿಗೆ ನಿರ್ದೇಶನ ಮತ್ತು ಬರಹ ನೀಡಿದ್ದಾರೆ.

ಇವರ ಹುಟ್ಟುಹಬ್ಬದ ಸಂಭ್ರಮಕ್ಕೆ ಸ್ಪೆಷಲ್ ಆಗಿ, ಇವರ ನಟನೆಯ "ದೈಜಿ" ಚಿತ್ರದ ಟೀಸರ್‌ ಕೂಡ ಬಿಡುಗಡೆಯಾಗಿದೆ. ಅಭಿಮಾನಿಗಳಿಗೆ ಇದು ಡಬಲ್ ಗಿಫ್ಟ್ ಆಗಿದೆ. ರಮೇಶ್ ಅರವಿಂದ್ ಅಂದರೆ ಕನ್ನಡ ಚಿತ್ರರಂಗದ ಬಂಡಲ್ ಆಫ್ ಪಾಸಿಟಿವಿಟಿ.
ಇಂದಿಗೂ ತಮ್ಮ ಆಕರ್ಷಕ ವ್ಯಕ್ತಿತ್ವ, ಮಿಂಚುವ ನಗು, ಹಾಗೂ ಜೀವಂತಿಕೆಯಿಂದ ಎಲ್ಲರಿಗೂ ಪ್ರೇರಣೆ. 61ನೇ ವಯಸ್ಸಿನಲ್ಲೂ ಅವರ ಉತ್ಸಾಹ, ಶಕ್ತಿ ಹಾಗೂ ಚೈತನ್ಯ ಯುವಕರಿಗಿಂತ ಕಡಿಮೆಯೇನೂ ಇಲ್ಲ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ರಮೇಶ್ ಅರವಿಂದ್ ಅವರಿಗೆ!