Back to Top

ಮಾರ್ನಮಿ ಚಿತ್ರದ ಟೀಸರ್‌ ಔಟ್- ಕರಾವಳಿ ಪ್ರೇಮಕಥೆಯಲ್ಲಿ ರಿತ್ವಿಕ್, ಚೈತ್ರಾ ಆಚಾರ್

SSTV Profile Logo SStv September 19, 2024
ಮಾರ್ನಮಿ ಚಿತ್ರದ ಟೀಸರ್‌ ಔಟ್
ಮಾರ್ನಮಿ ಚಿತ್ರದ ಟೀಸರ್‌ ಔಟ್
ಮಾರ್ನಮಿ ಚಿತ್ರದ ಟೀಸರ್‌ ಔಟ್- ಕರಾವಳಿ ಪ್ರೇಮಕಥೆಯಲ್ಲಿ ರಿತ್ವಿಕ್, ಚೈತ್ರಾ ಆಚಾರ್ ವಿಭಿನ್ನ ವಿಷಯ ಮತ್ತು ಹೊಸತನೆಯ ಕಥೆಗಳ ಮೂಲಕ ಗಮನ ಸೆಳೆಯುವ ಚಿತ್ರಗಳಲ್ಲಿ ಇದೀಗ ‘ಮಾರ್ನಮಿ’ ಕೂಡ ಒಂದು. 'ಪಿಂಗಾರ' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿರುವ ಪ್ರೀತಂ ಆರ್. ಶೆಟ್ಟಿ ಅವರ ಸಹಾಯಕನಾಗಿ ಕೆಲಸ ಮಾಡಿರುವ ರಿಶಿತ್ ಶೆಟ್ಟಿ ತಮ್ಮ ನಿರ್ದೇಶನದ ಚೊಚ್ಚಲ ಪ್ರಯತ್ನವನ್ನು ‘ಮಾರ್ನಮಿ’ ಮೂಲಕ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್ ಟೀಸರ್‌ ಅನ್ನು ಬೆಂಗಳೂರಿನ ಎಸ್.ಆರ್.ವಿ ಥಿಯೇಟರ್‌ನಲ್ಲಿ ಬಹಿರಂಗ ಮಾಡಲಾಯಿತು. ಈ ಸಂದರ್ಭ ಚಿತ್ರತಂಡ ಚಿತ್ರದ ಬಗ್ಗೆ ಕೆಲವು ವಿವರಗಳನ್ನು ಹಂಚಿಕೊಂಡಿತು. ಚಿತ್ರದ ಸಂಗೀತ ನಿರ್ದೇಶಕ ಚರಣ್ ರಾಜ್ ಮಾತನಾಡಿ, “ಈ ಹೊಸ ತಂಡದೊಂದಿಗೆ ಕೆಲಸ ಮಾಡುವುದು ನನಗೆ ಬಹಳ ಸಂತೋಷದ ಸಂಗತಿ. ಈ ಚಿತ್ರದಲ್ಲಿ ನನ್ನ ಅಚ್ಚುಮೆಚ್ಚಿನ ನಟರು ಇದ್ದಾರೆ ಮತ್ತು ಕಥೆಯೂ ಬಹಳ ಒಳ್ಳೆಯದು. ಐದು ಹಾಡುಗಳು ಚಿತ್ರದಲ್ಲಿ ಇರಲಿವೆ, ಮತ್ತು ನಾವು ಈಗಾಗಲೇ ಸಂಗೀತದ ಕೆಲಸ ಆರಂಭಿಸಿದ್ದೇವೆ” ಎಂದರು.