Back to Top

‘ಸ್ಯಾಂಡಲ್​ವುಡ್​ ಕಪ್ ಬ್ಯಾಡ್ಮಿಂಟನ್ ಟೂರ್ನಮೆಂಟ್’ಗೆ ಕಿಚ್ಚನ ಬೆಂಬಲ

SSTV Profile Logo SStv September 21, 2024
ಬ್ಯಾಡ್ಮಿಂಟನ್ ಟೂರ್ನಮೆಂಟ್’ಗೆ ಕಿಚ್ಚನ ಬೆಂಬಲ
ಬ್ಯಾಡ್ಮಿಂಟನ್ ಟೂರ್ನಮೆಂಟ್’ಗೆ ಕಿಚ್ಚನ ಬೆಂಬಲ
‘ಸ್ಯಾಂಡಲ್​ವುಡ್​ ಕಪ್ ಬ್ಯಾಡ್ಮಿಂಟನ್ ಟೂರ್ನಮೆಂಟ್’ಗೆ ಕಿಚ್ಚನ ಬೆಂಬಲ ಕಿಚ್ಚ ಸುದೀಪ್, ‘ಸ್ಯಾಂಡಲ್‍ವುಡ್‍ ಕಪ್ ಬ್ಯಾಡ್ಮಿಂಟನ್ ಟೂರ್ನಮೆಂಟ್’ಗೆ ಬೆಂಬಲ ಸೂಚಿಸಿದ್ದಾರೆ. ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು, ಮತ್ತು ಮಾಧ್ಯಮದವರನ್ನು ಒಳಗೊಂಡ ಈ ಟೂರ್ನಮೆಂಟ್‍ಗೆ ಜೆರ್ಸಿ ಅನಾವರಣ ಸಮಾರಂಭದಲ್ಲಿ ಸುದೀಪ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, "ಇಷ್ಟೊಂದು ಕಲಾವಿದರು ಬ್ಯಾಡ್ಮಿಂಟನ್ ಆಡುವವರು ಅಂತ ಗೊತ್ತಿರಲಿಲ್ಲ" ಎಂದು ಹಾಸ್ಯ ಮಾಡಿದ್ರು. ಟೂರ್ನಮೆಂಟ್ ಸೆಪ್ಟೆಂಬರ್ 28-29ರಂದು ಕೋರಮಂಗಲದಲ್ಲಿ ನಡೆಯಲಿದ್ದು, 50ಕ್ಕೂ ಹೆಚ್ಚು ಮ್ಯಾಚ್‍ಗಳನ್ನು ಆಯೋಜಿಸಲಾಗಿದೆ. ಸುದೀಪ್, ಈ ರೀತಿಯ ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತಾ, ಇನ್ನು ಹೆಚ್ಚಿನ ಕ್ರೀಡಾ ಪಂದ್ಯಾವಳಿಗಳಿಗಾಗಿ ಹಾರೈಸಿದ್ದಾರೆ.