Back to Top

ಜಯರಾಜ್​ ಮಗನ ಕಹಾನಿ ಇರುವ ಸಿನಿಮಾ ‘ಜಾಂಟಿ ಸನ್ ಆಫ್ ಜಯರಾಜ್’

SSTV Profile Logo SStv September 21, 2024
‘ಜಾಂಟಿ ಸನ್ ಆಫ್ ಜಯರಾಜ್’
‘ಜಾಂಟಿ ಸನ್ ಆಫ್ ಜಯರಾಜ್’
ಜಯರಾಜ್​ ಮಗನ ಕಹಾನಿ ಇರುವ ಸಿನಿಮಾ ‘ಜಾಂಟಿ ಸನ್ ಆಫ್ ಜಯರಾಜ್’ ಬೆಂಗಳೂರು ರೌಡಿಸಂ ಬೆನ್ನಟ್ಟಿರುವ ಮತ್ತೊಂದು ಸಿನಿಮಾ 'ಜಾಂಟಿ ಸನ್ ಆಫ್ ಜಯರಾಜ್' ಶೀಘ್ರದಲ್ಲೇ ತೆರೆಗೆ ಬರುತ್ತಿದೆ. ಭೂಗತ ಲೋಕದ ಹೆಸರಾಂತ ವ್ಯಕ್ತಿ ಜಯರಾಜ್ ಅವರ ಪುತ್ರ ಅಜಿತ್ ಜಯರಾಜ್ ಈ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಟೀಸರ್ ಬಿಡುಗಡೆಯಾಗಿದ್ದು, ಕಾರ್ಯಕ್ರಮದಲ್ಲಿ ವಿನೋದ್ ಪ್ರಭಾಕರ್ ಹಾಗೂ ಶ್ರೀನಗರ ಕಿಟ್ಟಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಆನಂದರಾಜ್ ಈ ಸಿನಿಮಾವನ್ನು ಕಥೆ ಬರೆದು ನಿರ್ದೇಶಿಸುತ್ತಿದ್ದು, 1989ರ ಬೆಂಗಳೂರು ಮತ್ತು ಆಕಾಲದ ಭೂಗತ ಲೋಕದ ಜೀವನವನ್ನು ಚಿತ್ರದಲ್ಲಿ ಆವಿಷ್ಕರಿಸಿದ್ದಾರೆ. ಜೊತೆಗೆ, ತಾಯಿ-ಮಗನ ಸಂವೇದನೆ, ಪ್ರೀತಿಯ ಸನ್ನಿವೇಶಗಳು ಮತ್ತು ಗೆಳತನದ ಭಾವನೆಗಳೂ ಸಿನಿಮಾದಲ್ಲಿದೆ. ಅಜಿತ್ ಜಯರಾಜ್, ನಾಯಕನಾಗಿ ಮೊದಲ ಬಾರಿಗೆ ಅಭಿನಯಿಸುತ್ತಿದ್ದು, "ಅಪ್ಪನ ಪಾತ್ರ ಮಾಡುವಾಗ ನರ್ವಸ್ ಆಗಿದ್ದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.