ಧನ್ಯಾ ರಾಮ್‌ಕುಮಾರ್ ಹೊಸ ಫೋಟೋ ವೈರಲ್: ಗ್ಲಾಮರ್ ಲುಕ್‌ನಿಂದ ಅಭಿಮಾನಿಗಳ ಮನಸೆಳೆದ ನಟಿ


ಕನ್ನಡ ಚಿತ್ರರಂಗದ ಯುವ ನಟಿ ಧನ್ಯಾ ರಾಮ್‌ಕುಮಾರ್, ತಮ್ಮ ಹೊಸ ಫೋಟೋಗಳ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಂದ ಭರ್ಜರಿ ಲೈಕ್ಸ್ ಮತ್ತು ಹಾರ್ಟ್ ಎಮೋಜಿಗಳ ಕಾಮೆಂಟ್‌ಗಳನ್ನು ಪಡೆಯುತ್ತಿವೆ.
ಧನ್ಯಾ ಅವರ ಹೊಸ ಫೋಟೋಗಳನ್ನು ವಿದೇಶ ಪ್ರವಾಸದ ವೇಳೆ ಕ್ಲಿಕ್ ಮಾಡಲಾಗಿದ್ದು, ವಿಶೇಷವಾಗಿ ಸಮುದ್ರ ತೀರದಲ್ಲಿ ತೆಗೆದ ಚಿತ್ರಗಳು ಕಣ್ಣು ಕುಕ್ಕುವಂತಿವೆ. ಸೂರ್ಯಾಸ್ತದ ಹಿನ್ನಲೆಯಲ್ಲಿ ನಿಂತು ನೀಡಿದ ಅವರ ಪೋಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅವರ ಗ್ಲಾಮರಸ್ ಲುಕ್ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಧನ್ಯಾ ರಾಮ್‌ಕುಮಾರ್ ಖ್ಯಾತ ನಟ ರಾಮ್‌ಕುಮಾರ್ ಅವರ ಮಗಳು ಹಾಗೂ ಡಾ. ರಾಜ್‌ಕುಮಾರ್ ಅವರ ಮೊಮ್ಮಗಳು. 2021ರಲ್ಲಿ ಬಿಡುಗಡೆಯಾದ ‘ನಿನ್ನ ಸನಿಹಕೆ’ ಚಿತ್ರದ ಮೂಲಕ ನಟಿಯಾಗಿ ಬೆಳ್ಳಿ ಪರದೆ ಮೇಲೆ ಎಂಟ್ರಿ ನೀಡಿದರು. ಈ ಚಿತ್ರದಲ್ಲಿ ಅವರು "ಅಮೃತಾ" ಪಾತ್ರದಲ್ಲಿ ಮಿಂಚಿ ಗಮನ ಸೆಳೆದಿದ್ದರು.
ನಂತರ ಅವರು ‘ಹೈಡ್ ಆ್ಯಂಡ್ ಸೀಕ್’, ‘ದಿ ಜಡ್ಜ್‌ಮೆಂಟ್’, ‘ಪೌಡರ್’, ‘ಕಾಲಾ ಪತ್ಥರ್’ ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್ ಹಾಗೂ ಬ್ಯುಸಿ ಶೆಡ್ಯೂಲ್‌ಗಳ ನಡುವೆ ಅವರು ವಿರಾಮ ತೆಗೆದುಕೊಂಡು ದೇಶ-ವಿದೇಶ ಸುತ್ತಾಡುತ್ತಿದ್ದಾರೆ. ಪ್ರವಾಸದಲ್ಲಿರುವಾಗ ತೆಗೆದ ಫೋಟೋಗಳನ್ನು ಆಗಾಗ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದರ ಮೂಲಕ ಅವರ ಹೃದಯ ಗೆಲ್ಲುತ್ತಿದ್ದಾರೆ.
ಧನ್ಯಾ ಅವರ ಹೊಸ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆಗಳ ಮಳೆ ಸುರಿದಿದೆ. ಅನೇಕರು ಕಾಮೆಂಟ್ ಬಾಕ್ಸ್‌ನಲ್ಲಿ “ಅದ್ಭುತ”, “ಸಖತ್ ಗ್ಲಾಮರ್”, “ಅತ್ಯಂತ ಸುಂದರ” ಎಂದು ಪ್ರಶಂಸಿಸಿದ್ದಾರೆ. ಕೆಲವರು ಅವರನ್ನು “ಸಂಡಲ್‌ವುಡ್ ಕ್ವೀನ್” ಎಂದೂ ಕರೆದಿದ್ದಾರೆ. ಧನ್ಯಾ ರಾಮ್‌ಕುಮಾರ್ ತಮ್ಮ ಸಿನಿ ಪಯಣದ ಜೊತೆಗೆ ಗ್ಲಾಮರ್ ಹಾಗೂ ಸರಳತೆಯ ಸಮತೋಲನವನ್ನು ಕಾಯ್ದುಕೊಂಡು ಮುಂದೆ ಸಾಗುತ್ತಿದ್ದಾರೆ. ಅವರ ಮುಂದಿನ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
Trending News
ಹೆಚ್ಚು ನೋಡಿ“ಇಂದು ನನ್ನ ಜೀವನದ ವಿಶೇಷ ದಿನ” – ಮೊದಲ ಸಿನಿಮಾ ಬಿಡುಗಡೆ ದಿನವನ್ನು ಆಚರಿಸಿದ ಕೆಂಡಸಂಪಿಗೆ ಹೀರೋ!
