Back to Top

ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ

SSTV Profile Logo SStv September 23, 2024
ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ
ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ
ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ ಬಳ್ಳಾರಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್‌ಗೆ ಇಂದು ಮಹತ್ವದ ದಿನವಾಗಿದ್ದು, ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ 26 ದಿನಗಳಿಂದ ಮುದ್ದೆ ಮುರಿಯುತ್ತಿದ್ದಾರೆ. ಜಾಮೀನಿಗೆ ಅರ್ಜಿ ಹಾಕಿರೋ ಆರೋಪಿ ದರ್ಶನ್‌ಗೆ ಇಂದು ಮಹತ್ವದ ದಿನವಾಗಿದೆ. ಶನಿವಾರ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದ ದರ್ಶನ್ ಪರ ವಕೀಲರು ತುರ್ತಾಗಿ ವಿಚಾರಣೆ ಮಾಡುವಂತೆ ಮನವಿ ಮಾಡಿದ್ದರು. ಸೋಮವಾರಕ್ಕೆ ಜಾಮೀನು ಅರ್ಜಿ ಮುಂದೂಡಲಾಗಿತ್ತು. ಹೀಗಾಗಿ ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಇನ್ನು ಆರೋಪಿ ದರ್ಶನ್ ಜೈಲಿನಲ್ಲಿ ಟೆನ್ಷನ್‌ಗೆ ಒಳಗಾಗಿದ್ದಾರೆ. ಜಾಮೀನು ಅರ್ಜಿ ವಿಚಾರವಾಗಿ ಜೈಲು ಸಿಬ್ಬಂದಿಯಿಂದ ಪದೇ ಪದೇ ಮಾಹಿತಿ ಪಡೆಯುತ್ತಿದ್ದಾರೆ. ಇದೇ ಕಾರಣಕ್ಕೆ ಇಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ವಕೀಲರು ಜೈಲಿಗೆ ಭೇಟಿ ನೀಡುವ ಸಾಧ್ಯತೆಯಿದೆ ಒಂದು ವೇಳೆ ಜಾಮೀನು ಸಿಗದೇ ಇದ್ದರೆ ಮುಂದೆ ಜೈಲು ಬದಲಾವಣೆಯ ಬಗ್ಗೆಯೂ ಮಹತ್ವದ ಚರ್ಚೆ ನಡೆಯುವ ಸಾಧ್ಯತೆಯಿದೆ. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಬೆನ್ನು ನೋವಿನ ಸಮಸ್ಯೆ ಇದ್ದರೂ ಒಂದು ಪ್ಲಾಸ್ಟಿಕ್ ಚೇರ್ ಸಿಗುತ್ತಿಲ್ಲ. ದಿಂಬು, ಬೆಡ್ ಕೂಡ ಜೈಲು ಅಧಿಕಾರಿಗಳು ಕೊಡುತ್ತಿಲ್ಲ. ಹೀಗಾಗಿ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಜೈಲು ಬದಲಾವಣೆಗೂ ಕೋರ್ಟ್ ಮೊರೆ ಹೋಗುವ ಸಾಧ್ಯತೆ ದಟ್ಟವಾಗಿದೆ. ಇಂದು ದರ್ಶನ್ ಜಾಮೀನು ಭವಿಷ್ಯ ಏನಾಗಲಿದೆ ಅಂತ ಕಾದು ನೋಡಬೇಕಿದೆ