ಮಾಜಿ ಪತ್ನಿ ಧನಶ್ರೀಯ ಶಾಕಿಂಗ್ ಹೇಳಿಕೆ: "ಚಹಾಲ್ ಬಗ್ಗೆ ಹೇಳಿದ್ರೆ ಬೆಚ್ಚಿಬೀಳ್ತೀರಾ!"


ಪ್ರೀತಿ ಎಂದರೆ ಒಮ್ಮೆ ಬದುಕನ್ನೇ ಬದಲಾಯಿಸುವ ಶಕ್ತಿ. ಒಡವೆ, ಹಣ, ಮನೆ-ಮನೆತನವೇ ಬೇಡ ಹೃದಯದ ತಂತಿ ತಾಗಿದರೆ ಸಾಕು. ಆದರೆ ಇಂದಿನ ಪ್ರೀತಿ ವ್ಯವಹಾರಿಕವಾಗಿ, ಕೆಲವೇ ಕ್ಷಣಗಳ ಹೊಳಪಿನಲ್ಲಿ ಕಳೆದುಹೋಗುತ್ತಿದೆ. ಅರ್ಥೈಸಿಕೊಳ್ಳುವ ಬದಲು ಕೆಸರು ಎರಚಾಟವೇ ಹೆಚ್ಚಾಗಿದೆ. ಇದರ ಹೊಸ ಉದಾಹರಣೆ ಎಂದರೆ ಭಾರತೀಯ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಮತ್ತು ಅವರ ಮಾಜಿ ಪತ್ನಿ ಧನಶ್ರೀ ವರ್ಮಾ.
ಒಮ್ಮೆ ಪತಿ-ಪತ್ನಿಯಾಗಿ ಹೆಸರಾಗಿದ್ದ ಈ ಜೋಡಿ ಈಗ ಪ್ರತ್ಯೇಕವಾಗಿದೆ. ಆದರೆ ದೂರವಾದ ಮೇಲೂ ಅವರ ನಡುವೆ ಆರೋಪ–ಪ್ರತ್ಯಾರೋಪಗಳು ಮುಂದುವರಿದಿವೆ. ಇತ್ತೀಚೆಗೆ ಅಮೆಜಾನ್‌ನಲ್ಲಿ ಪ್ರಸಾರವಾಗುತ್ತಿರುವ ‘ರೈಸ್ ಅಂಡ್ ಫಾಲ್’ ಶೋಗೆ ಧನಶ್ರೀ ಪ್ರವೇಶಿಸಿದ್ದು, ಅಲ್ಲಿ ಅವರು ಚಹಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅವರ ಹೇಳಿಕೆಯಲ್ಲಿ ಗಾಢ ಅಸಮಾಧಾನ ಸ್ಪಷ್ಟವಾಗಿದೆ: “ನಾನು ಮಾತಾಡಿದರೆ ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತೆ.” ಧನಶ್ರೀ ಹೇಳಿದ ಮಾತುಗಳು
ಕಾರ್ಯಕ್ರಮದ ಸ್ಪರ್ಧಿ ನಯನ್‌ದೀಪ್ ರಕ್ಷಿತ್ “ನೀವು ನೀಡಿದ ಸಂದರ್ಶನ ನಿಮಗೆ ಖುಷಿ ನೀಡಿದೆಯಾ?” ಎಂದು ಕೇಳಿದಾಗ ಧನಶ್ರೀ ಹೀಗೆ ಪ್ರತಿಕ್ರಿಯಿಸಿದರು:
- “ಇಲ್ಲ, ನಾನು ಹಲವು ವಿಷಯಗಳ ಬಗ್ಗೆ ಮಾತನಾಡಲು ಬಯಸಲಿಲ್ಲ.”
- “ಇಬ್ಬರ ಮಧ್ಯೆ ಜಗಳವಾದಾಗ, ಅದನ್ನು ಮುಗಿಸಲು ನಿರ್ಧರಿಸಿದರೆ, ಅವರು ತಮ್ಮ ಮಾತಿಗೆ ಬದ್ಧರಾಗಿರಬೇಕು.”
- “ನಾನು ಬಯಸಿದ್ದರೆ, ಅವನ (ಚಹಾಲ್) ಬಗ್ಗೆ ತುಂಬಾ ವಿಚಾರ ಹೇಳಬಹುದಿತ್ತು. ಪತ್ನಿಯಾಗಿ ನನಗೆ ಹೇಳಲು ಸಾಕಷ್ಟು ವಿಚಾರಗಳಿದ್ದವು.”
“ನನ್ನಲ್ಲಿ ಗೌರವವಿದೆ. ಮದುವೆಯ ಮೊದಲು, ಮದುವೆಯ ಸಮಯದಲ್ಲಿ, ಇನ್ನೂ ಈಗಲೂ ನಾನು ಅವರನ್ನು ಗೌರವಿಸುತ್ತೇನೆ.”
ಧನಶ್ರೀ ಅವರ ಮುಖ್ಯ ಸಂದೇಶ ಏನೆಂದರೆ:
- “ತಮ್ಮ ಇಮೇಜ್ ಸುಧಾರಿಸಲು ಇನ್ನೊಬ್ಬರನ್ನು ಕೀಳಾಗಿ ತೋರಿಸುವುದು ಅರ್ಥಹೀನ.”
- “ಗೌರವವೇ ನನಗೆ ಮುಖ್ಯ.”
ಧನಶ್ರೀ ಅವರ ಈ ಹೇಳಿಕೆಗಳು ಹೊರಬಿದ್ದ ತಕ್ಷಣವೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಅಭಿಮಾನಿಗಳು ಇಬ್ಬರ ನಡುವೆ ನಡೆಯುತ್ತಿರುವ ಈ ‘ಪಬ್ಲಿಕ್ ರಂಪ’ ಬಗ್ಗೆ ತೀವ್ರವಾಗಿ ಚರ್ಚಿಸುತ್ತಿದ್ದಾರೆ. ಇನ್ನು ಧನಶ್ರೀಯ ಈ ಮಾತುಗಳಿಗೆ ಚಹಾಲ್ ಏನು ಪ್ರತಿಕ್ರಿಯಿಸುತ್ತಾರೆ ಎನ್ನುವುದು ಕಾದು ನೋಡಬೇಕಾಗಿದೆ.
Trending News
ಹೆಚ್ಚು ನೋಡಿ“ಇಂದು ನನ್ನ ಜೀವನದ ವಿಶೇಷ ದಿನ” – ಮೊದಲ ಸಿನಿಮಾ ಬಿಡುಗಡೆ ದಿನವನ್ನು ಆಚರಿಸಿದ ಕೆಂಡಸಂಪಿಗೆ ಹೀರೋ!
