“ನನ್ನ ಮಗಳು ಕಾಣೆಯಾಗಿದ್ದಾಳೆ” ಹೇಳಿಕೆ ಕೊಟ್ಟ ಸುಜಾತ ಭಟ್‌ಗೆ ಬಿಗ್ ಬಾಸ್ 12 ಆಫರ್?


ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಾರಿ ಶೋಗೆ ಸಂಬಂಧಿಸಿದಂತೆ ಸುಜಾತ ಭಟ್ ಅವರ ಹೆಸರು ಕೇಳಿಬಂದಿದೆ. "ನನ್ನ ಮಗಳು ಕಾಣೆಯಾಗಿದ್ದಾಳೆ" ಎಂದು ರಾಜ್ಯಾದ್ಯಂತ ಸುದ್ದಿಯಲ್ಲಿದ್ದ ಸುಜಾತ ಭಟ್ ಅವರಿಗೆ ಬಿಗ್ ಬಾಸ್ ತಂಡದಿಂದ ಆಫರ್ ಬಂದಿದೆ ಎಂಬ ಮಾಹಿತಿ ಹೊರಬಂದಿದೆ.
ಧರ್ಮಸ್ಥಳದಲ್ಲಿ ನಡೆದ ಅನನ್ಯ ಭಟ್ ಪ್ರಕರಣ ರಾಜ್ಯದೆಲ್ಲೆಡೆ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಸುಜಾತ ಭಟ್ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಕಣ್ಣೀರು ಹಾಕಿ ಎಲ್ಲರ ಮುಂದೆ ಬೇಡಿಕೊಂಡಿದ್ದರು. ದೇವರ ಮೇಲೆಯೇ ಪ್ರಮಾಣ ಮಾಡಿ, ತಮ್ಮ ನೋವನ್ನು ಹಂಚಿಕೊಂಡಿದ್ದರು. ಆದರೆ ಪ್ರಕರಣ ಮುಂದುವರಿದಂತೆ ಪ್ರತಿದಿನ ಹೊಸ ಹೊಸ ಟ್ವಿಸ್ಟ್‌ಗಳು ಹೊರಬರುತ್ತಿದ್ದವು.
ಅವರ ತೋರಿಸಿದ ಫೋಟೋ ಕೂಡ ನಿಜವಾಗಿ ಅನನ್ಯಳದ್ದು ಅಲ್ಲ, ವಾಸಂತಿ ಎಂಬ ಮಹಿಳೆಯದ್ದು ಎಂದು ವಾಸಂತಿಯ ಸಹೋದರ ಆರೋಪ ಮಾಡಿದ್ದರು. ಈ ಪ್ರಕರಣದಿಂದಲೇ ಸುಜಾತ ಭಟ್ ಮನೆಮಾತಾದರು. ಅನನ್ಯ ಭಟ್ ಪ್ರಕರಣದ ನಂತರ ಎಲ್ಲೆಡೆ ಸುಜಾತ ಭಟ್ ಬಗ್ಗೆ ಚರ್ಚೆ ನಡೆಯುತ್ತಿದೆ. ಅವರ ಹೆಸರು ಪತ್ರಿಕೆ, ಟಿವಿ, ಸೋಶಿಯಲ್ ಮೀಡಿಯಾದಲ್ಲಿ ನಿರಂತರವಾಗಿ ಕೇಳಿಬರುತ್ತಿದೆ. ಇದೇ ಕಾರಣದಿಂದ ಬಿಗ್ ಬಾಸ್ ಸೀಸನ್ 12 ತಂಡವು ಸುಜಾತ ಭಟ್ ಅವರನ್ನು ಶೋಗೆ ಕರೆಸಿಕೊಳ್ಳಲು ಆಸಕ್ತಿ ತೋರಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಾರಿ ಬಿಗ್ ಬಾಸ್ ಕನ್ನಡವನ್ನು ಕಿಚ್ಚ ಸುದೀಪ್ ಅವರೇ ನಿರೂಪಿಸಲಿದ್ದಾರೆ. ಶೋ ಇದೇ ತಿಂಗಳ 28ರಿಂದ ಪ್ರಾರಂಭವಾಗಲಿದ್ದು, ಈಗಾಗಲೇ ಹೊಸ ಲೋಗೋ ಬಿಡುಗಡೆಯಾಗಿದೆ. ಆದರೆ, ಸ್ಪರ್ಧಿಗಳ ಲಿಸ್ಟ್ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಹೀಗಾಗಿ ಸುಜಾತ ಭಟ್ ನಿಜವಾಗಿಯೂ ಶೋಗೆ ಎಂಟ್ರಿಯಾಗುತ್ತಾರೆಯಾ ಎಂಬ ಕುತೂಹಲ ತಾರಕಕ್ಕೇರಿದೆ.
ಕಳೆದ ಬಾರಿಗೆ (ಸೀಸನ್ 11) ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಶೋಗೆ ಬಂದ ಹಳ್ಳಿ ಹೈದ ಹನುಮಂತು ಕೊನೆಗೂ ಟೈಟಲ್ ಗೆದ್ದಿದ್ದರು. ಹೀಗಾಗಿ ಬಿಗ್ ಬಾಸ್ ವೇದಿಕೆ ಸಾಮಾನ್ಯ ವ್ಯಕ್ತಿಗಳಿಗೂ ಅಪಾರ ಜನಪ್ರಿಯತೆಯನ್ನು ನೀಡಬಲ್ಲದು ಎನ್ನುವುದು ಸಾಬೀತಾಗಿದೆ. ಒಟ್ಟಿನಲ್ಲಿ, ಸುಜಾತ ಭಟ್ ಬಿಗ್ ಬಾಸ್ ಸೀಸನ್ 12ರಲ್ಲಿ ಭಾಗವಹಿಸುತ್ತಾರೆಯೇ? ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚುತ್ತಿದೆ. ಅಧಿಕೃತ ಘೋಷಣೆಗೆ ಇನ್ನೂ ಕಾಯಲೇಬೇಕಾಗಿದೆ.
Related posts
Trending News
ಹೆಚ್ಚು ನೋಡಿ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಬಿಡುಗಡೆಗೆ ದಿನಾಂಕ ಫಿಕ್ಸ್ – ಚಾಪ್ಟರ್ 1 ಟ್ರೇಲರ್ ನೋಡಲು ಅಭಿಮಾನಿಗಳ ಕಾತರ!
