ಮದುವೆಯ ದಿನ ಬಿಳಿ ಮೈಸೂರು ಸಿಲ್ಕ್ ಸೀರೆಯಲ್ಲಿ ಮಿಂಚಿದ ಅನುಶ್ರೀ – ಬೆಲೆ ಕೇಳಿ ಅಭಿಮಾನಿಗಳ ಶಾಕ್!


ಕನ್ನಡದ ಜನಪ್ರಿಯ ನಿರೂಪಕಿ ಮತ್ತು ನಟಿ ಅನುಶ್ರೀ, ಇತ್ತೀಚೆಗೆ ತಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದಾರೆ. ರೋಷನ್ ಅವರೊಟ್ಟಿಗೆ ಹಸೆಮಣೆ ಏರಿದ ಅನುಶ್ರೀ ಮದುವೆ ಕಾರ್ಯಕ್ರಮ ಬೆಂಗಳೂರಿನ ಹೊರವಲಯದಲ್ಲಿ ಅದ್ಧೂರಿಯಾಗಿ ನಡೆದಿತ್ತು. ನಟ ಶಿವಣ್ಣ ಸೇರಿದಂತೆ ಚಲನಚಿತ್ರರಂಗದ ಹಲವಾರು ಗಣ್ಯರು ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಆದರೆ ಮದುವೆಗಿಂತಲೂ ಹೆಚ್ಚು ಸುದ್ದಿಯಲ್ಲಿದ್ದದ್ದು ಅನುಶ್ರೀ ಧರಿಸಿದ ಮದುವೆ ಸೀರೆ. ಸಾಮಾಜಿಕ ಜಾಲತಾಣದಲ್ಲಿ ಸೀರೆಯ ಬೆಲೆ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆದವು. ಕೆಲವರ ಹೇಳಿಕೆ ಪ್ರಕಾರ, ಅನುಶ್ರೀ ಧರಿಸಿದ ಸೀರೆಯ ಬೆಲೆ 2.5 ಲಕ್ಷ ರೂ. ಎಂದು ಭಾರೀ ಚರ್ಚೆ ನಡೆಯಿತು. ಸುದ್ದಿಗಳು ಹೆಚ್ಚಾಗುತ್ತಿದ್ದಂತೆ ಅನುಶ್ರೀ ಸ್ವತಃ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದರು. ಅವರು ಧರಿಸಿದ್ದ ಬಿಳಿ ಬಣ್ಣದ ಮೈಸೂರು ಸಿಲ್ಕ್ ಸೀರೆಯ ನಿಜವಾದ ಬೆಲೆ ಕೇವಲ ₹2700 ರೂಪಾಯಿಗಳು ಮಾತ್ರ ಎಂದು ತಿಳಿಸಿದ್ದಾರೆ.
ಅದರ ಜೊತೆಗೆ, ಈ ಸೀರೆಯನ್ನು ಅವರು ಮೈಸೂರು ಸಿಲ್ಕ್ ಉದ್ಯೋಗ್ನಿಂದ ಖರೀದಿಸಿದ್ದಾಗಿ ತಿಳಿಸಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಲಕ್ಷಾಂತರದ ಬೆಲೆ ಕುರಿತ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ. ಜನಪ್ರಿಯ ನಿರೂಪಕಿ ಹಾಗೂ ನಟಿಯಾದ ಅನುಶ್ರೀ ಮದುವೆಯಂತಹ ವಿಶೇಷ ದಿನದಲ್ಲಿ ಇಂತಹ ಸರಳ ಹಾಗೂ ಅಫೋರ್ಡೇಬಲ್ ಸೀರೆಯನ್ನು ಧರಿಸಿದ್ದಕ್ಕಾಗಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದರಿಂದ ಅವರ ಸರಳತೆ ಮತ್ತೊಮ್ಮೆ ಎಲ್ಲರ ಹೃದಯ ಗೆದ್ದಿದೆ.
ಅನುಶ್ರೀ ಬಿಚ್ಚಿಟ್ಟ ಈ ಮಾಹಿತಿ ಬಳಿಕ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಸೂಪರ್ ಅನುಶ್ರೀ, ನೀನು ನಿಜವಾಗಿಯೂ ವಿಭಿನ್ನ" ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಹೆಚ್ಚಿನ ಬೆಲೆಯ ಬಟ್ಟೆ ತೊಟ್ಟರೂ ಜನಮನ ಗೆಲ್ಲುವುದು ಕಷ್ಟ. ಆದರೆ ಸರಳತೆಯ ಮೂಲಕ ಪ್ರೀತಿ ಗೆಲ್ಲುವುದು ಸುಲಭ. ಅನುಶ್ರೀ ಅದಕ್ಕೆ ಜೀವಂತ ಸಾಕ್ಷಿ.
Trending News
ಹೆಚ್ಚು ನೋಡಿ“ಇಂದು ನನ್ನ ಜೀವನದ ವಿಶೇಷ ದಿನ” – ಮೊದಲ ಸಿನಿಮಾ ಬಿಡುಗಡೆ ದಿನವನ್ನು ಆಚರಿಸಿದ ಕೆಂಡಸಂಪಿಗೆ ಹೀರೋ!
